Latest

ಈಗಲ್ಟನ್ ರೆಸಾರ್ಟ್ ಸರಕಾರಕ್ಕೆ 998 ಕೋಟಿ ರೂ. ದಂಡ ಕಟ್ಟಬೇಕಿದೆ!

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಸಮ್ಮಿಶ್ರ ಸರಕಾರದ ಭಾಗವಾಗಿರುವ ಕಾಂಗ್ರೆಸ್ ಸಚಿವರು, ಶಾಸಕರು ಉಳಿದುಕೊಂಡಿರುವ ಬಿಡದಿಯ ಈಗಲ್ಟನ್ ರೆಸಾರ್ಟ್ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ 998 ಕೋಟಿ ರೂ. ದಂಡ ಪಾವತಿಸಬೇಕಿದೆ.

ರೆಸಾರ್ಟ್ ನಿರ್ಮಾಣಕ್ಕೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ. ಸುಮಾರು 100 ಎಕರೆಯಷ್ಟು ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎನ್ನುವ ವಿಷಯ ಈ ಹಿಂದೆ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿತ್ತು. ಆಗ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೂಮಿ ವಾಪಸ್ ಪಡೆಯಲು ಇಲ್ಲವೇ 998 ಕಟಿ ರೂ. ದಂಡ ವಸೂಲಿ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದರು. 

ಆದರೆ ಇದ್ಯಾವುದೂ ಆಗಿಲ್ಲ. ಈಗ ಸರಕಾರವೇ ಈ ರೆಸಾರ್ಟ್ನಲ್ಲಿ ಹೋಗಿ ಉಳಿದುಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಈ ಸಂಬಂಧ ಟ್ವೀಟ್ ಮಾಡಿದ್ದು, ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ದಿನೇಶ ಗುಂಡೂರಾವ್ ಅವರೇ ಬರುವಾಗ ಈ ದಂಡದ ಹಣವನ್ನು ವಸೂಲಿ ಮಾಡಿಕೊಂಡು ಬನ್ನಿ. ಈ ಹಣವನ್ನು ರೈತರ ಸಾಲ ಮನ್ನಾಕ್ಕೆ ಈ ಹಣವನ್ನುಬಳಸಬಹುದು  ಎಂದು ಹೇಳಿದೆ. 

Home add -Advt

Related Articles

Back to top button