Latest

ಐಪಿಎಲ್ ಪಂದ್ಯಗಳು ಭಾರತದಲ್ಲೇ ನಡೆಯಲಿವೆ

 

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

Home add -Advt

ಲೋಕಸಭಾ ಚುನಾವಣೆ ನಡೆಯಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಪಂದ್ಯ ವಿದೇಶದಲ್ಲಿ ನಡೆಯಲಿದೆ ಎನ್ನುವ ವದಂತಿಗೆ ಬಿಸಿಸಿಐ ತೆರೆ ಎಳೆದಿದ್ದು, ಭಾರತಲ್ಲೇ ಐಪಿಎಲ್ ನಡೆಯಲಿದೆ ಎಂದು ತಿಳಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಿಯ (12ನೇ ಆವೃತ್ತಿ) ಪಂದ್ಯಗಳು ಭಾರತದಲ್ಲೇ ನಡೆಯಲಿದ್ದು, ದಿನಾಂಕವಿನ್ನೂ ನಿಗದಿಯಾಗಿಲ್ಲ.

ಚುನಾವಣೆ  ನಡೆದರೂ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.

 ಮಾರ್ಚ್ 23ರಿಂದ ಐಪಿಎಲ್ ಆರಂಭಿಸುವ ಸಾಧ್ಯತೆ ಇದ್ದು, ಈ ಕುರಿತು ಚರ್ಚೆಯ ಬಳಿಕ  ವೇಳಾಪಟ್ಟಿತಿಳಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಇದರಿಂದಾಗಿ ಐಪಿಎಲ್ ಸಂಬಂಧ ಹಬ್ಬಿದ್ದ ಭಾರೀ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. 

Related Articles

Back to top button