ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಕರ್ನಾಟಕದ ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪಟ್ಟಿಗೆ ವರಿಷ್ಠರು ಈವರೆಗೂ ಒಪ್ಪಿಗೆ ನೀಡಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಟ್ಟಿಯೊಂದಿಗೆ ನವದೆಹಲಿಯಲ್ಲಿ ಕಾಯುತ್ತಿದ್ದು, ಅಮಿತ್ ಶಾ ಮತ್ತು ರಾಮಲಾಲ್ ಒಪ್ಪಿಗೆ ನೀಡಬೇಕಿದೆ.
ನವದೆಹಲಿಯಲ್ಲಿ ಎರಡು ದಿನದಿಂದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಕರ್ನಾಟಕದ ಪಟ್ಟಿಯ ಬಗ್ಗೆ ಮಂಗಳವಾರ ಒಂದು ಸುತ್ತಿನ ಚರ್ಚೆ ನಡೆದಿದೆ. ಒಂದೊಂದು ರಾಜ್ಯದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ.
ಈಗ ಪ್ರಕಟವಾಗುತ್ತಿರುವುದೆಲ್ಲ ಕೇವಲ ಸಂಭಾವ್ಯ ಅಭ್ಯರ್ಥಿಗಳ ಹೆಸರು ಎಂದು ಉನ್ನತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
ಒಂದು ಮೂಲದ ಪ್ರಕಾರ ಕರ್ನಾಟಕದ 9 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಮೂವರು ಹಾಲಿ ಸಂಸದರು ಹಾಗೂ ಕೆಲವು ವಲಸೆ ಅಭ್ಯರ್ಥಿಗಳ ಬಗ್ಗೆ ದೀರ್ಘ ಚರ್ಚೆ ನಡೆಯುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿಯೂ ಇನ್ನೂ ನಿರ್ಧಾರವಾಗಿಲ್ಲ. ಇಂದು ರಾತ್ರಿಯ ಹೊತ್ತಿಗೆ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೆಹಿತರಿಗೆ ಹಾಗೂ ಎಲ್ಲ ಗ್ರುಪ್ ಗಳಿಗೆ ಹಂಚಿರಿ)



