Latest

ಕಾಂಗ್ರೆಸ್ ನ 72 ಸಾವಿರ ರೂ. ಯೊಜನೆಯಿಂದ ಹಣದುಬ್ಬರ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಕಾಂಗ್ರೆಸ್ ಘೋಷಿಸಿರುವ ಕನಿಷ್ಠ ಆದಾಯ ಯೋಜನೆಯಿಂದ ದೇಶದಲ್ಲಿ ಹಣದುಬ್ಬರ ಉಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಓರಿಸ್ಸಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಚುನಾವಣೆ ಬಂದಾಗ ಬಡತನ ನಿರ್ಮೂಲನೆ ವಿಷಯ ಮಾತನಾಡುತ್ತದೆ.  ಅದರ ಮುಖಂಡರ ಬಡತನ ಮಾತ್ರ ನಿರ್ಮೂಲನೆಯಾಗುತ್ತಿದೆ. ಜನರದ್ದಲ್ಲ ಎಂದು ಟೀಕಿಸಿದರು. 

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ ತಿಂಗಳಿಗೆ 6 ಸಾವಿರ ರೂ. ನೀಡುವುದಾಗಿ ವಾಗ್ದಾನಾ ಮಾಡಿರುವ ಕುರಿತು ಮೊದಲ ಬಾರಿಗೆ ಪ್ರಸ್ತಾಪಿಸಿದ ಮೋದಿ, ಇದರಿಂದ ರಾಷ್ಟ್ರದಲ್ಲಿ ಹಣದುಬ್ಬರ ಹೆಚಚಾಗುತ್ತದೆ. ಕಾಂಗ್ರೆಸ್ ಗೆ ಅಭಿವೃದ್ಧಿ ಬೇಕಾಗಿಲ್ಲ. ಬಡವರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button