Latest

ಕಾಂಗ್ರೆಸ್ ಶಾಸಕಾಂಗ ಸಭೆಗೆ ಅತೃಪ್ತರಲ್ಲಿ ನಾಲ್ವರು ಗೈರು…

 

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಶುಕ್ರವಾರ ಸಂಜೆ ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 4.15ರ ವರೆಗೆ ಅತೃಪ್ತರೆಂದು ಗುರುತಿಸಿಕೊಂಡ ನಾಲ್ವರು ಶಾಸಕರು ಆಗಮಿಸಿರಲಿಲ್ಲ. 

3.30ಕ್ಕೆ ಸಭೆ ಕರೆಯಲಾಗಿತ್ತು. ಆದರೆ ಶಾಸಕರು ವಿಳಂಬವಾಗಿ ಬರುತ್ತಿರುವುದರಿಂದ 4 ಗಂಟೆಗೆ ಸಭೆಯನ್ನು ಮುಂದೂಡಲಾಗಿತ್ತು. ಆದರೆ 4.20ರ ವರೆಗೆ ಬಂಡಾಯ ಶಾಸಕರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಚಿಂಚೋಳಿ ಶಾಸಕ ಉಮೇಶಜಾಧವ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಸಭೆಗೆ ಆಗಮಿಸಲಿಲ್ಲ. ಇವರು ಹಾಜರಾಗುವ ಆಸೆಯೂ ಕಾಂಗ್ರೆಸ್ ಮುಖಂಡರಲ್ಲಿ ಕ್ಷೀಣಿಸಿದೆ. ಸಭೆ 4.20ರ ವರೆಗೂ ಆರಂಭಿಸಲಾಗಿಲ್ಲ.

ಕಂಪ್ಲಿ ಶಾಸಕ ಗಣೇಶ, ಶೃಂಗೇರಿ ಶಾಸಕ ರಾಜೇ ಗೌಡ ತಡವಾಗಿ ಆಗಮಿಸುವ ಮಾಹಿತಿ ನೀಡಿದ್ದಾರೆನ್ನಲಾಗಿದೆ. 

ಈ ಸಭೆಗೆ ಹಾಜರಾಗದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್ ಈಗಾಗಲೆ ಕಠಿಣ ಎಚ್ಚರಿಕೆ ನೀಡಿದೆ. ಹಾಗಾಗಿ ಈ ನಾಲ್ವರ ವಿರುದ್ಧ ಯಾವ ರೀತಿಯ ಕ್ರಮವಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಇದೇ ವೇಳೆ, ಈಗ ಹಾಜರಾಗಿರುವವರಲ್ಲಿ ಇಬ್ಬರು ಸೇರಿದಂತೆ ಒಟ್ಟೂ 6 ಶಾಸಕರು ಶನಿವಾರ ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ವದಂತಿ ಹರಡಿದೆ. ಹಾಗಾಗಿ ಶನಿವಾರ ಸಂಜೆಯ ಹೊತ್ತಿಗೆ ರಾಜ್ಯ ರಾಜಕೀಯ ಮತ್ತೊಂದು ತಿರುವು ಪಡೆಯುವ ಸಾಧ್ಯತೆ ಇದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button