Latest

ಕೆಎಲ್ಇ ವಿದ್ಯಾರ್ಥಿಗಳ ಫ್ಯಾಶನ್ ಷೋ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಯುವ ಮನಸ್ಸುಗಳು ಸಮಾಜಕ್ಕೆ ಒಪ್ಪಿಗೆಯಾಗಿರುವ ಆಚರಣೆಗಳಿಗಿಂತ ಭಿನ್ನವಾದುದನ್ನು ಮಾಡಲು ಇಷ್ಟಪಡುತ್ತಾರೆ. ಅದೇ ಒಂದು ಟ್ರೆಂಡ್ ಆಗುತ್ತದೆ. ಅದನ್ನೆ ಫ್ಯಾಶನ್ ಎನ್ನಲಾಗುತ್ತದೆ ಎಂದು ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಪ್ರಹ್ಲಾದ್ ತಡಸದ್ ಹೇಳಿದರು.

ಅವರು ಇಂದು  ಡಾ. ಜೀರಗೆ ಸಭಾ ಭವನದಲ್ಲಿ ಕೆಎಲ್‌ಇ ಸಂಸ್ಥೆಯ ಫ್ಯಾಶನ್ ಟೆಕ್ನಾಲಜಿ ಮತ್ತು ಅಪರಲ್ ಡಿಸೈನ್ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ನಡೆಸಿಕೊಟ್ಟ ಫ್ಯಾಶನ್ ಶೋ ವಿನ್ಯಾಸ-೨೦೧೯ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಫ್ಯಾಶನ್ ಅತ್ಯಂತ ಪ್ರಾಚೀನವಾದದ್ದು. ಆ ಕಾಲಘಟ್ಟದಲ್ಲಿಯ ಸಾಂಸ್ಕೃತಿಕ, ಸಾಮಾಜಿಕ ರೀತಿ ರಿವಾಜುಗಳಿಗಿಂತ ಭಿನ್ನವಾದ ಉಡುಗೆ ತೊಡುಗೆ ಹಾಕಿಕೊಳ್ಳುವುದು. ಕೆಲವು ದಶಕಗಳ ಮೊದಲು ಫ್ಯಾಶನ್ ಕೇವಲ ಶ್ರೀಮಂತ ಯುವ ಜನತೆಯ ಕೈಯಲ್ಲಿತ್ತು. ತಂತ್ರಜ್ಞಾನ ಬೆಳೆದಂತೆ ಜನಸಮುದಾಯದತ್ತ ಮುನ್ನುಗ್ಗಿದೆ. ಫ್ಯಾಶನ್ ಹಾಗು ವಿನ್ಯಾಸ ಒಂದು ಕಲೆಯಾಗಿದ್ದು ಇದಕ್ಕೆ ವಿಶಾಲವಾದ ಮಾರುಕಟ್ಟೆ ಕೊಡುಗೆ ಅಪಾರ. ವಿನೂತನ ವಿನ್ಯಾಸ ವಸ್ತ್ರಗಳನ್ನು, ಆಭರಣಗಳನ್ನು ಧರಿಸುವ ಮಾಡೆಲಿಂಗ್ ವೃತ್ತಿಯು ಕೂಡಾ ಇಂದು ಜನಪ್ರಿಯವಾಗುತ್ತಿದೆ. ಈ ವೃತ್ತಿ ಆರ್ಥಿಕ ದೃಷ್ಟಿಯಿಂದಲೂ ದೇಶದ ಯುವಜನತೆಗೆ ಅತ್ಯಂತ ಪ್ರಿಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಬಿ.ವಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಜಯಸಿಂಹ ಇಂದು ಯುವಪೀಳಿಗೆ ಮನಸ್ಸಿಗೆ ಮುದುನಿಡುವ ಫ್ಯಾಷನ್ ಗಳಿಗೆ ಮಾರುಹೋಗಿದೆ ಎಂದು ಹೇಳಿದರು. ಪ್ರಾಂಶುಪಾಲರಾದ ಜ್ಯೋತಿ ಮುತ್ತೂರ್ ಸ್ವಾಗತಿಸಿದರು.


ನಂತರ ನಡೆದ  ಫ್ಯಾಶನ್ ಶೋದಲ್ಲಿ ಅಂತಿಮ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ ಪ್ರಪ್ರಥಮ ಬಾರಿಗೆ ಸಂಶೋಧಿಸಿ ವಿನ್ಯಾಸಗೊಳಿಸಿರುವ ೧೮ ಥೀಮ್ ಅನಾವರಣ ಮಾಡಿದರು. ಒಟ್ಟಾರೆ ೯೦ ಕ್ಕೂ ಹೆಚ್ಚು ಹೊಸಬಗೆಯ ವಸ್ತ್ರವಿನ್ಯಾಸಗಳನ್ನು ತಯಾರಿಸಿ ೪೭ ಯುವ  ವಿದ್ಯಾರ್ಥಿಗಳು, ಮಾಡಲ್ಸ್‌ಗಳು ರ‍್ಯಾಂಪ್ ಮೇಲೆ ಮಾರ್ಜಾಲ ನಡಿಗೆ  ಪ್ರಸ್ತುತಪಡಿಸಿದರು.


ವೇದಿಕೆಯಲ್ಲಿ  ಜ್ಯೂರಿಗಳಾದ ಡಾ.ಎ.ಜಿ.ಶಂಕರ್ ಮತ್ತು  ಜಸ್ವಿಂದರ ಖುರಾನಾ ಉಪಸ್ಥಿತರಿದ್ದರು.
ಅತ್ಯುತ್ತಮವಾಗಿ ವಿನ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೊಷಕ, ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.
ರೂಪಾ ಸಾಮಂತ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button