Latest

ಕೌಶಲ್ಯ 2ಕೆ19 – ಪ್ರಾಜೆಕ್ಟ್ ಪ್ರದರ್ಶನ ಹಾಗೂ ಸ್ಪರ್ಧೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಚಿಕ್ಕೋಡಿಯ ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟ ಪ್ರದರ್ಶನ ಹಾಗೂ ಸ್ಪರ್ಧೆ ಕೌಶಲ್ಯ ೨ಕೆ೧೯ ಅನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸ್ಪರ್ಧೆಯಲ್ಲಿ ಬೇರೆ-ಬೇರೆ ಕಾಲೇಜುಗಳಿಂದ ೪೦ ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಈ ಪ್ರಾಜೆಕ್ಟ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ  ಸಿ. ಬಿ. ಕೋರೆ ಪಾಲಿಟೆಕ್ನಿಕ್ ಪ್ರಾಚಾರ್ಯ ಪ್ರೊ. ಸಂದೀಪ ಕ್ಯಾತನವರ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದರು.

ವಿದ್ಯಾರ್ಥಿಗಳು ಇಂಥಹ ಶೈಕ್ಷಣಿಕ ಪ್ರೊಜೆಕ್ಟ್‌ಗಳಲ್ಲಿ ತೊಡಗಿಕೊಳ್ಳುವುದರಿಂದ ಪ್ರಾಯೋಗಿಕ ಜ್ಞಾನ ಹೆಚ್ಚುತ್ತದೆ. ಜೊತೆಗೆ ಕಂಪನಿಗಳಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳುವಲ್ಲಿ  ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ  ಡಾ. ಪ್ರಸಾದ ರಾಂಪೂರೆ, ವಿದ್ಯಾರ್ಥಿಗಳಲ್ಲಿ ಹೊಸ ಕಲ್ಪನೆಗಳನ್ನು ಸೃಷ್ಟಿಸಲು ಈ ಕೌಶಲ್ಯ ೨ಕೆ೧೮ ಪ್ರೊಜೆಕ್ಟ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಪ್ರೊಜೆಕ್ಟಗಳನ್ನು ಸಿದ್ದಪಡಿಸುವಿಕೆಯಲ್ಲಿ ಅತ್ಯಂತ ಕಾಳಜಿಪುರ್ವಕವಾಗಿ ತೋಡಗಿಸಿಕೊಂಡರೆ ಮಾತ್ರ ಪ್ರಾಯೋಗಿಕ ಜ್ಞಾನ ಹೆಚ್ಚಲು ಸಾಧ್ಯ ಎಂದರು.

ಇಂದಿನ ದಿನದಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತ  ಅನ್ವಯಿಕ ಪ್ರಾಜೆಕ್ಟಗಳನ್ನು ಆಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದರು.
ಸಿವಿಲ್ ವಿಭಾಗದಲ್ಲಿ ಕು. ಹುಲಗಪ್ಪಾ ಬಸಪ್ಪಾ ವಡ್ಡರ ಹಾಗೂ ತಂಡ ಪ್ರಥಮ, ಕು. ದೀಪಕ ದೇಸಾಯಿ ಹಾಗೂ ತಂಡ ದ್ವೀತಿಯ ಮತ್ತು ಕು. ವಿಠ್ಠಲ ಮೌನೀಶ ಪತ್ತಾರ ಹಾಗೂ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಮೆಕ್ಯಾನಿಕಲ್ ವಿಭಾಗದಲ್ಲಿ ಕು. ಶುಭಂ ರಾಮಗೌಡ ಪಾಟೀಲ ಹಾಗೂ ತಂಡ ಪ್ರಥಮ, ಕು. ಸಾಗರ ಹೊನಕಂಡೆ ಹಾಗೂ ತಂಡ ದ್ವಿತೀಯ ಮತ್ತು ಕು. ಸಮರ್ಥ ಪತ್ತಾರ ಹಾಗೂ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಕು. ಮಂಜುನಾಥ ಸನ್ನಟ್ಟಿ ಹಾಗೂ ತಂಡ ಪ್ರಥಮ, ಕು. ಕಲ್ಮೇಶ ಹಂದಿಗುಂದ ಹಾಗೂ ತಂಡ ದ್ವೀತಿಯ ಮತ್ತು ಕು. ಶ್ರೀನಾಥ ನಿಡವಣಿ ಹಾಗೂ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.
ಕಂಪ್ಯೂಟರ್ ಸಾಯನ್ಸ್ ವಿಭಾಗದಲ್ಲಿ ಕು. ಶೃತಿ ಶೇಖರ ಕದಮ ಹಾಗೂ ತಂಡ ಪ್ರಥಮ, ಕು. ಸ್ಮೀತಾ ಆರ್. ಜವಳಗಿ ಹಾಗೂ ತಂಡ ದ್ವಿತೀಯ ಮತ್ತು ಕು. ಅಕ್ಷಯ ಚಿಗದಾನಿ ಹಾಗೂ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ನಾಲ್ಕು ವಿಭಾಗಗಳ ವಿಜೇತರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ಪ್ರಥಮ ಸ್ಥಾನಕ್ಕೆ ೫೦೦೦ರೂ., ದ್ವಿತೀಯ ಸ್ಥಾನಕ್ಕೆ ೩೦೦೦ರೂ., ತೃತೀಯ ಸ್ಥಾನಕ್ಕೆ ೨೦೦೦ರೂ. ನೀಡಲಾಗಿದ್ದು, ಒಟ್ಟು ೪೦೦೦೦  ರೂ. ಬಹುಮಾನ ವಿತರಿಸಲಾಯಿತು.
ಪ್ರೊ. ನಿಖಿಲ ಕಳ್ಳಿಮನಿ, ಪ್ರೊ. ಎಲ್. ಕೆ. ಪಾಟೀಲ, ಪ್ರೊ. ಆರ್. ಎಸ್. ಖೋತ, ಪ್ರೊ. ಎಸ್. ಎಮ್. ಚಂದ್ರಕಾಂತ , ಪ್ರೊ. ಮುರಳಿ ಅಂಬೇಕರ, ಪ್ರೊ. ಬಿ. ಎನ್. ಚೌಕಿಮಠ, ಪ್ರೊ. ಬಸವರಾಜ ಹುನಶ್ಯಾಳ, ಪ್ರೊ. ವಿನಯ ಮನಗುಳಿ ನಿರ್ಣಾಯಕರಾಗಿದ್ದರು.
ಪ್ರೊ. ಅಭಿನಂದನ ಕಬ್ಬೂರ ಸಂಯೋಜಿಸಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button