Latest

ಕ್ಯಾನ್ಸರ್ ಮತ್ತು ಕಿಡ್ನಿ ಹರಳು ಉಚಿತ ತಪಾಸಣಾ ಶಿಬಿರ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಶಹಾಪುರದ ಕೆಎಲ್‌ಇ ಆಯುರ್ವೇದ ಆಸ್ಪತ್ರೆಯಲ್ಲಿ ಮಾ.೭ ರಂದು ಕ್ಯಾನ್ಸರ್‌ನಿಂದ ಬಳಲುವ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ರೋಗಿಗಳು ತಮ್ಮ ರಕ್ತ, ಸ್ಕ್ಯಾನ್, ಸೂಜಿ ತಪಾಸಣೆ ವಿವರಗಳನ್ನು ಜೊತೆಗೆ ತರಬೇಕು. ಈ ಶಿಬಿರದಲ್ಲಿ ಪುಣೆಯ ರಸಾಯು ಕ್ಯಾನ್ಸರ್ ಕ್ಲಿನಿಕ್ ವೈದ್ಯರು ಸಲಹೆ ನೀಡಲಿದ್ದಾರೆ. ಹಾಗೆಯೇ ಮಾ.೮ ರಂದು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧ ರವರೆಗೆ ಉಚಿತ ಕಿಡ್ನಿ ತಪಾಸಣಾ ಶಿಬಿರ  ನಡೆಯಲಿದ್ದು, ಕೊಲ್ಹಾಪುರದ ಆಯುರ್ವೇದ ವೈದ್ಯ ಡಾ. ಸುನೀಲ ಇನಾಮದಾರ ಸಲಹೆ ನೀಡಲಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button