ಪ್ರಗತಿವಾಹಿನಿ ಸುದ್ದಿ, ದೊಡವಾಡ
ಸಮೀಪದ ಚಿಕ್ಕಬೆಳ್ಳಿಕಟ್ಟಿಯ ಎಮ್ ಎಮ್ ಆನಿಕಿವಿ ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪಠ್ಯಾಧಾರಿತ ರಂಗೋಲಿ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಬಿಡಿಸಿದ್ದ ವಿಜ್ಞಾನ ವಿಷಯದ ಪ್ರಯೋಗಾತ್ಮಕ ಶೈಲಿಯ ನಾನಾ ಚಿತ್ರಗಳು ನೋಡುಗರ ಗಮನ ಸೆಳೆದವು.
ನಂತರ ನಡೆದ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೂಪಾ ಇಂಚಲ, ದ್ವಿತೀಯ ಲಕ್ಷ್ಮೀ ಹುಣಶಿಕಟ್ಟಿ, ತೃತೀಯ ಸ್ಥಾನ ಗಳಿಸಿದ ಅನಿತಾ ಮಾಟೊಳ್ಳಿ ಇವರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಯು ಎಲ್ ಕರ್ಚಗಟ್ಟಿ ವಿಜ್ಞಾನ ವಿಷಯದಲ್ಲಿ ನೀಡಲಾಗುವ ಪ್ರಮುಖ ಚಿತ್ರಗಳನ್ನು ವಿವರಣೆ ಸಹಿತ ಸುಂದರವಾಗಿ ಬಿಡಿಸುವುದರಿಂದ ವಿದ್ಯಾರ್ಥಿಗಳ ಚಿತ್ರಕಲಾ ಕೌಶಲ್ಯ ವೃದ್ಧಿಯಾಗುವುದರ ಜತೆಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಸಂಪಾದಿಸಬಹುದು ಎಂದರು. ವಿಜ್ಞಾನ ಶಿಕ್ಷಕ ಪಿ ವಿ ಗುಜ್ಜರ ಮಾರ್ಗದರ್ಶನ ಮಾಡಿದ್ದರು.
ಎಸ್‌ಡಿಎಮ್‌ಸಿ ಉಪಾಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಶಿಕ್ಷಕರಾದ ಎಸ್ ಆರ್ ಮುತ್ನಾಳ, ಸುಧಾ ಹಂಚಿನಾಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಚಿಕ್ಕಬೆಳ್ಳಿಕಟ್ಟಿ ಹಾಗೂ ಗೋವನಕೊಪ್ಪ ಗ್ರಾಮಗಳ ಪ್ರಮುಖರಾದ ಶಂಕರ ಬಾಗಲಕೋಟಿ, ಸುರೇಶ ಆನಿಕಿವಿ, ಚನಬಸಪ್ಪ ಹೊಂಗಲ, ಯಲ್ಲಪ್ಪ ವಾರದ, ಹಣಮಂತ ಬಾಗಲಕೋಟಿ, ಯಲ್ಲಪ್ಪ ಹೊಳಿ, ಈರಣ್ಣ ಹಟ್ಟಿಹೊಳಿ, ಯಲ್ಲಪ್ಪ ನರೇಂದ್ರ, ಅಡಿವೆಪ್ಪ ಹಟ್ಟಿಹೊಳಿ, ರಮೇಶ ಗಾಳಿ, ಸಿದ್ದಯ್ಯ ಹುಗ್ಗಿ ಮತ್ತು ಶಾಲೆಯ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ