ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
4 ದಿನ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಬೆಳಗಾವಿಯಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
22 ದೇಶಗಳ ಗಾಳಿಪಟ ಪಟುಗಳು ಭಾಗವಹಿಸಿದ್ದು, ಒಟ್ಟಾರೆ 3 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಆಯೋಜಕ ಅಭಯ ಪಾಟೀಲ ತಿಳಿಸಿದ್ದಾರೆ.
ಗಾಳಿಪಟ ಉತ್ಸವದಿಂದಾಗಿ ಬೆಳಗಾವಿಗೆ ಅಂತಾರಾಷ್ಟ್ರೀಯ ಸ್ಥಾನಮಾನ ಬಂದಿದೆ. ಬೆಳಗಾವಿಯಿಂದ ದುಬೈ ಸೇರಿದಂತೆ ಹಲು ದೇಶಗಳಿಗೆ ವಿಮಾನಯಾನ ಆರಂಭಿಸುವ ಯತ್ನ ನಡೆಯುತ್ತಿದೆ. ಬೆಳಗಾವಿ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಉತ್ಸವ ಉದ್ಘಾಟಿಸಿದ ಸಂಸದ ಸುರೇಶ ಅಂಗಡಿ ತಿಳಿಸಿದರು.
ಮಹಿಳೆಯರಿಗಾಗಿ, ಮಕ್ಕಳಿಗಾಗಿ ಹಾಗೂ ಯುವಕರಿಗಾಗಿ ಒಂದೊಂದು ದಿನ ಗಾಳಿಪಟ ಉತ್ಸವ ನಡೆಸಲಾಗುತ್ತಿದ್ದು, ಹಲವಾರು ಮಳಿಗೆಗಳನ್ನೂ ಹಾಕಲಾಗಿದೆ.
9ನೇ ವರ್ಷ ಈ ಉತ್ಸವ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಯಡಿಯೂರಪ್ಪ ಮಾರ್ಗದ ಮಾಲಿನಿ ನಗರದಲ್ಲಿ ಉತ್ಸವ ಆಯೋಜಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ