Latest

ಗ್ರಾಮೀಣ ಭಾಗದಲ್ಲಿ ಧರ್ಮಸ್ಥಳ ಸಂಘದಿಂದ ನೆರವು-ಬಾಬಾಸಾಹೇಬ ಪಾಟೀಲ

       

     ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು

ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲ ರೀತಿಯಿಂದಲೂ ಧರ್ಮಸ್ಥಳ ಸಂಘವು ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ತಿಗಡೊಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಲಾದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು, ಈ ಸಂಘವು ಧನಸಹಾಯದ ಜೊತೆಗೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಸ್ವ ಉದ್ಯೋಗ ಕೈಗೊಳ್ಳಲು ವಿವಿಧ ರೀತಿಯ ತರಬೇತಿಗಳನ್ನು ನೀಡಿ ಉದ್ಯೋಗವಂತರನ್ನಾಗಿ ಮಾಡಿ ಗ್ರಾಮೀಣ ಭಾಗದಲ್ಲಿ ಕುಟುಂಬಗಳನ್ನು ಆರ್ಥಿಕವಾಗಿ ಸಭಲರನ್ನಾಗಿ ಮಾಡಲು ಸಂಘವು ಶ್ರಮಿಸುತ್ತಿದೆ. ಅಲ್ಲದೆ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.

ಕೆಪಿಸಿಸಿ ಮಾಜಿ ಸದಸ್ಯ ಶಂಕರ ಹೊಳಿ ಮಾತನಾಡಿ, ಯೋಜನೆಯಿಂದ ಮುಖ್ಯವಾಗಿ ಮಹಿಳೆಯರನ್ನು ಜಾಗೃತಗೊಳಿಸಿ ವ್ಯವಹಾರದ ಜ್ಞಾನದ ಜೊತೆಗೆ ಕುಟುಂಬ ನಿರ್ವಹಣೆ ಮಾಹಿತಿ ನೀಡುತ್ತಿರುವುದು ಮಹಿಳೆಯರಿಗೆ ಅನಕೂಲವಾಗಿದೆ ಎಂದು ಹೇಳಿದರು.

ಜಿಪಂ ಸದಸ್ಯ ರಾಧಾಶ್ಯಾಮ ಕಾದ್ರೋಳಿ, ಧರ್ಮಸ್ಥಳ ಸಂಘದ ಕಾರ್ಯದರ್ಶಿ, ದೇವೇಂದ್ರ ಪಾಟೀಲ, ಪ್ರಬಂಧಕ ಜಗದೀಶ ಕೆ, ಗ್ರಾಪಂ ಅಧ್ಯಕ್ಷೆ ಪಾರ್ವತಿ ದೇಸಾಯಿ, ಉಪಾಧ್ಯಕ್ಷ ಅಶೋಕ ಅಗಸರ, ರಾಣಿ ಶುಗರ್ ನಿರ್ದೇಶಕ ಶಿವನಗೌಡ ಪಾಟೀಲ, ಸೋಮೇಶ್ವರ ಶುಗರ್ ಉಪಾದ್ಯಕ್ಷ ಪಾರಿಸ್ ಬಾವಿ, ನಿರ್ದೇಶಕರಾದ ಅದ್ರ್ಯಶಪ್ಪ ಕೊಟಬಾಗಿ, ಸಾವಂತ ಕಿರಬನವರ, ಚನ್ನಯ್ಯ ಪಲ್ಲಕ್ಷಿ, ಬಸವರಾಜ ಶಿರಗಾಪೂರ ಇತರರು ಇದ್ದರು. ಯೋಜನಾಧಿಕಾರಿ ಪ್ರಶಾಂತ ನಾಯ್ಕ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button