ಪ್ರಗತಿವಾಹಿನಿ ಸುದ್ದಿ, ಚಿಂಚಲಿಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾಧ್ಯ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾದೇವಿ. ಭಾರತ ಹುಣ್ಣಿಮೆ ನಂತರ ಬರುವ ಹಸ್ತಾ ನಕ್ಷತ್ರದ ಶುಭಗಳಿಗೆಯಲ್ಲಿ ಜರಗುವ ಜಾತ್ರೆ ಇದಾಗಿದ್ದು ಉತ್ತರ ಕರ್ನಾಟಕದಲ್ಲಿಯೇ ದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿದೆ.
ಫೇ.19 ರಿಂದ ಫೇ. 26ರ ವರೆಗೆ ಜಾತ್ರೆ ಜರುಗಲಿದ್ದು ಜಾತ್ರೆಗೆ ಸುಮಾರು 3 ಲಕ್ಷಕ್ಕಿಂತ ಹೆಚ್ಚು ಭಕ್ತರು ನೆರೆಯ ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂದ್ರಪ್ರದೇಶದ, ದೆಹಲಿ ಹೀಗೆ ಇತರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಫೇ.23 ರಂದು ಮಹಾ ನೈವ್ಯದ್ಯ ಇದ್ದು ಈ ದೇವಿಗೆ ಮಹಾಕಾರತಿ, ಮಹಾಕಾಳಿ, ಮಾಯವ್ವಾ ಎಂಬೆಲ್ಲ ಹೆಸರಿನಿಂದ ಪೂಜಿಸಲ್ಪಡುವ ಮಾಯಕ್ಕಾ ದೇವಿಯ ಜಾತ್ರೆಗೆ ಚಿಂಚಲಿ ಗ್ರಾಮ ಸಜ್ಜಾಗಿದೆ.ಪೌರಾಣಿಕ ಹಿನ್ನೆಲೆ:ದೇವಿಯು ಮಹಾರಾಷ್ಟ್ರದ ಮಾನದೇಶ (ಕೊಂಕಣ) ದಿಂದ ಬಂದವಳು ಎಂದು ಹೇಳುತ್ತಾರೆ. ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ ಅಲ್ಲಿಯೇ ನೆಲೆಯೂರಿದ್ದಾಳೆಂದು ಐತಿಹಾಸಿಕ ಕಥೆಗಳು ಹೇಳುತ್ತವೆ. ಭಕ್ತರು ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುತ್ತಾರೆ .ಹಿರಿಯರ ಪ್ರಕಾರ ಚಿಂಚಲಿಯಲ್ಲಿ ಹಿರಿದೇವಿ ಮೂಲ ದೇವತೆ. ಇವಳೇ ಗ್ರಾಮ ದೇವತೆ. ಮಾಯಕ್ಕಾದೇವಿ ಹಿರಿದೇವಿಯ ಆಶ್ರಯ ಪಡೆದು ಚಿಂಚಲಿಯಲ್ಲಿ ನೆಲೆಸಿದಳು. ಅದಕ್ಕಾಗಿ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ಸಲ್ಲುತ್ತದೆ. ಈಗಲೂ ಮೊದಲು ಹಿರಿದೇವಿ ದರ್ಶನ ಮಾಡಿ ನೈವೇದ್ಯ ಸಲ್ಲಿಸಿ ನಂತರ ಮಾಯಕ್ಕಾದೇವಿಗೆ ನೈವೇದ್ಯ ಸಲ್ಲಿಸುತ್ತಾರೆ ಭಕ್ತರು.ದೇವಿಯ ಪವಾಡ:ಒಂದು ದಿನ ದೇವಿಯು ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋದಾಗ ಅಲ್ಲಿ ಒಬ್ಬ ಕುರಿಕಾಯುವನ ಹತ್ತಿರ ಹೋಗಿ ಕುಡಿಯಲು ಕುರಿಯ ಹಾಲು ಕೇಳಿದಳು. ಅದಕ್ಕೆ ಕುರಿಕಾಯುವವನು ಕೊಡುವುದಿಲ್ಲ ಎಂದು ನಿರಾಕರಿಸಿದನಂತೆ. ಆಗ ಮಾಯಕ್ಕಾ ದೇವಿ ತನ್ನ ಶಕ್ತಿಯಿಂದ ಹಳ್ಳವನೆಲ್ಲ ಹಾಲಾಗಿ ಹರಿಯುವಂತೆ ಮಾಡಿದಳಂತೆ. ಇಂದಿಗೂ ಆ ಹಳ್ಳಕ್ಕೆ ‘ಹಾಲು ಹಳ್ಳ’ ಎಂಬ ಹೆಸರಿನಿಂದ ಕರೆಯುತ್ತಾರೆ. ಅದರ ಪಕ್ಕದಲ್ಲಿ ಕುರಿ ಕಾಯುತ್ತಿದ್ದವರಲ್ಲಿ ಕುರಿಯ ಉಣ್ಣೆ ಕೇಳಿದಕ್ಕೆ ಅವರು ನಿರಾಕರಿಸಿದ್ದರಿಂದ ಕೋಪದಿಂದ ದೇವಿ ನೀಡಿದ ಶಾಪದಿಂದ ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ. ಇಂದಿಗೂ ಹಾಲು ಹಳ್ಳದ ದಡದಲ್ಲಿ ಗುಂಪು ಗುಂಪಾಗಿ ಬಿದ್ದ ಕಲ್ಲುಗಳನ್ನು ಉಣ್ಣೆ ಮುತ್ತಪ್ಪನ ಕಲ್ಲುಳಿ ಎಂಬ ಹೆಸರಿನಿಂದ ಕರೆಯುತ್ತಾರೆ.ದೇವಿಯ ಅಲಂಕಾರ:ತೆಲೆಯ ಮೇಲೆ ಕಿರೀಟ, ಅದರ ಮೇಲೆ ಐದು ಹೆಡೆಯ ಸರ್ಪ, ನಾಲ್ಕು ಕೈಗಳ ತುಂಬಾ ಹಸಿರು ಬಳೆಗಳು, ಮೈತುಂಬಾ ಬಂಗಾರದ ಒಡವೆಗಳು, ಬಲಗೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ತ್ರಿಶೂಲಹಾಗೂ ಎಡಗೈಯಲ್ಲಿ ಹಾವು ಕಂಡು ಬರುತ್ತದೆ. ದೇವಿಯನ್ನು ಶಕ್ತಿ ದೇವಿ ಹಾಗೂ ಪಾರ್ವತಿ ಅವತಾರ ಎನ್ನುತ್ತಾರೆ ಇಲ್ಲಿನ ಹಿರಿಯರು.ದೇವಸ್ಥಾನದ ಮುಖ ಪೂರ್ವಕ್ಕೆ ಇದ್ದು 50 ಅಡಿ ಎತ್ತರದ ಮಹಾದ್ವಾರ ಇದೆ. ದೇವಿಯ ಮುಖ್ಯ ವಾಹನ ಕುದುರೆ. ದೇವಿಯ ವಿಗ್ರಹಗಳು, ಪಲ್ಲಕ್ಕಿ, ಉತ್ಸವ ಮೂರ್ತಿ ಎಲ್ಲವೂ ಅಶ್ವಾರೂಢವಾಗಿರುವುದು ವಿಶೇಷ. ಭಕ್ತರು ಮಾಯಕ್ಕನ ಕುದುರೆ ಮುಖಕ್ಕೆ ಭಂಡಾರ ಲೇಪಿಸಿ ನಂತರ ಹಣೆಗೆ ಲೇಪಿಸುವುದು ರೂಢಿ.21 ಶತಮಾನದಲ್ಲೂ ಕೂಡಾ ಅಪಾರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಅಪಾರ ಭಕ್ತರು ಎತ್ತಿನ ಗಾಡಿಯ ಮೂಲಕ ಹಾಡುತ್ತಾ ಕುಣಿಯತ್ತಾ ದೇವಿಯ ದರ್ಶನ ಪಡೆಯಲು ಬರುತ್ತಾರೆ ಭಕ್ತರು. ಹಿರಿಯರು ರೂಢಿಸಿರುವ ವಾಡಿಕೆಯಂತೆ ತೆಲೆಮಾರುಗಳಿಂದ ಬಂದಿರುವಂತ ಆಚರಣೆ ಭಕ್ತಿಯನ್ನು ಬಿಡದೆ ಪ್ರತಿ ವರ್ಷ ಭಾರತ ಹುಣಿಮೆ ನಂತರ ಬರುವ ಹಸ್ತಾ ಶುಭ ಗಳಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ ಗಡಿಭಾಗದ ಭಕ್ತರು..Read Next
14 hours ago
*BREAKING: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ*
16 hours ago
*ಬೋಂಡಿ ಬೀಚ್ ನಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ: 12 ಜನರು ಸಾವು*
16 hours ago
*ಬಸ್ ಹತ್ತುವಾಗ ಜಾರಿ ಬಿದ್ದ 4 ವರ್ಷದ ಬಾಲಕಿ ಮೇಲೆ ಹರಿದ ಬಸ್: ಸ್ಥಳದಲ್ಲೇ ಸಾವು*
17 hours ago
*ಮಂಗಳವಾರ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗಳ ಪ್ರದಾನ:* *ಅಕಾಡೆಮಿಗೆ ಹೊಸ ಸ್ವರೂಪ ನೀಡಿದ ಸಂಗಮೇಶ ಬಬಲೇಶ್ವರ*
17 hours ago
*ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ‘ಕೈ’ ಘಟಾನುಘಟಿ ನಾಯಕರು ಭಾಗಿ*
19 hours ago
*ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಬ್ರಹ್ಮಾನಂದ ಗುರೂಜಿ ವಿರುದ್ಧ FIR ದಾಖಲು*
20 hours ago
*ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸಂಸತ್ ಕಲಾಪ ವೀಕ್ಷಣೆ ಭಾಗ್ಯ ಕಲ್ಪಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ*
20 hours ago
*ಪಿಎಸ್ಐ ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್: ಮನೆಗಳಿಗೆ ನುಗ್ಗಿ ಕೇಸ್ ಹಾಕುವುದಾಗಿ ಬೆದರಿಸಿ ಹಣ, ಚಿನ್ನಾಭರಣ ವಸೂಲಿ: ನಕಲಿ ಪೊಲೀಸ್ ಸೇರಿ ನಾಲ್ವರು ಅರೆಸ್ಟ್*
21 hours ago
*ದೆಹಲಿಯಲ್ಲಿ ಬೀಡುಬಿಟ್ಟ ರಾಜ್ಯ ಕಾಂಗ್ರೆಸ್ ನಾಯಕರು: ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್*
22 hours ago
*ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ*
Check Also
Close


