Latest

ಡಿ.5ರಿಂದ ಜಯಂತಿ ಮಹೋತ್ಸವ, ಗುರುವಂದನ ಕಾರ್ಯಕ್ರಮ

 

 

ಡಾ:ಶಿವಬಸವ ಮಹಾಸ್ವಾಮಿಗಳವರ ೧೨೯ ನೇ ಜಯಂತಿ ಮಹೋತ್ಸವ
ಮತ್ತು ಡಾ:ತೋಂಟದ ಸಿದ್ಧರಾಮ ಸ್ವಾಮಿಜಿ ಗುರುವಂದನ ಕಾರ್ಯಕ್ರಮ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ದಿ.ಶಿವಬಸವ ಸ್ವಾಮಿಜಿಯವರ ೧೨೯ ನೇ ಜಯಂತಿ ಮಹೋತ್ಸವ ಮತ್ತು ಡಾ.ತೋಂಟದ ಸಿದ್ಧರಾಮ ಸ್ವಾಮಿಜಿ ಅವರ ಗುರುವಂದನ ಕಾರ್ಯಕ್ರಮಗಳನ್ನು ಡಿ.5ರಿಂದ 8ರ ವರೆಗೆ ಶಿವಬಸವ ನಗರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
5ರಂದು ಸಂಜೆ 5 ಗಂಟೆಗೆ ಶ್ರೀಮನ್ನಿರಂಜನ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಗುರುವಂದನ ಸಮಾರಂಭ ನಡೆಯಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮನ್ಮಹಾರಾಜ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು,ಜಗದ್ಗುರು ಮೂರುಸಾವಿರಮಠ, ಹುಬ್ಬಳ್ಳಿ ಮತ್ತು ಶ್ರೀ ಮನ್ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀ ಸಿದ್ಧಸಂಸ್ಥಾನಮಠ, ನಿಡಸೋಸಿ ಅವರುಗಳು ವಹಿಸಲಿದ್ದಾರೆ.
ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ, ಧಾರವಾಡ ಅವರಿಂದ ಬಸವ ಬೆಳಗುಅಭಿನಂದನ ಸಂಪುಟ ಲೋಕಾರ್ಪಣೆಗೊಳ್ಳಲಿದೆ. ಶ್ರೀ ಶಿವಾನಂದ ಮಹಾಸ್ವಾಮಿಗಳು,ಶ್ರೀ ಸಿದ್ಧೇಶ್ವರಮಠ, ಹಂದಿಗುಂದ-ಆಡಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಶ್ರೀ ಜಗದ್ಗುರು ತೋಂಟದಾರ್ಯ ಶಾಖಾಮಠ, ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಮ್ಮುಖದಲ್ಲಿ ಹಲವಾರು ಪೂಜ್ಯರು ಉಪಸ್ಥಿತರಿರಲಿದ್ದಾರೆ . ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಸವರಾಜ ಸಾದರ ಅವರು ಅಭಿನಂದನ ನುಡಿ ಆಡಲಿದ್ದಾರೆ.
6 ರಂದು ಸಂಜೆ 5 ಗಂಟೆಗೆ ಕನ್ನಡ ರಾಜ್ಯೋತ್ಸವ – ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಸಮಾರಂಭದ ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜಿ ವಹಿಸಲಿದ್ದಾರೆ. ಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಶ್ರೀ ದೊರೆಸ್ವಾಮಿಮಠ, ಭೈರನಹಟ್ಟಿ ಇವರ ಸಮ್ಮುಖದಲ್ಲಿ ಮಂಟೂರು ಸಿದ್ಧಾರೂಢ ಆಶ್ರಮದ ಶ್ರೀ ಸದಾನಂದ ಸ್ವಾಮಿಜಿ ನೇತೃತ್ವದಲ್ಲಿ ಸಿದ್ಧಸಂಸ್ಥಾನಮಠ, ಚಿಂಚಣಿಯ ಪೂಜ್ಯಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ಮತ್ತು ಚರಮೂರ್ತಿ ಸಂಪಾದನಾ ಮಠ, ಚಿಕ್ಕೋಡಿಯ ಪೂಜ್ಯಶ್ರೀ ಸಂಪಾದನಾ ಮಹಾಸ್ವಾಮಿಗಳಿಗೆ ಗೌರವ ಸಮ್ಮಾನ ನಡೆಯಲಿದೆ. ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಎಂ. ಆರ್. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಆಗಮಿಸಲಿದ್ದಾರೆ. ಆತ್ಮಸ್ವಾಸ್ಥ್ಯ ಶ್ರೀ ಪ್ರಶಸ್ತಿ ಪುರಸ್ಕೃತ ನವದೆಹಲಿ ಶ್ರೀ ಅರವಿಂದ ಆಶ್ರಮದ ಡಾ. ರಮೇಶ ಬಿಜಲಾನಿ ಅವರನ್ನು . ಆತ್ಮಸ್ವಾಸ್ಥ್ಯ ಶ್ರೀ ಪ್ರಶಸ್ತಿ ನೀಡಿ ಸತ್ಕರಿಸಲಾಗುವದು. ಬಿ. ಆಯ್. ಕೋಣೆ ಈರನಟ್ಟಿ, ಬಿ. ಎಸ್. ಪೂಜಾರ, ಆರ್. ಬಿ. ಪಾಟೀಲ, ಎಸ್. ಎಸ್. ಅನಿಗೋಳ ಇಚಲಕರಂಜಿ, ಇವರುಗಳನ್ನು ಪ್ರಸಾದಶ್ರೀ ಗೌರವ ನೀಡಿ ಸಮ್ಮಾನಿಸಲಾಗುವುದು.
ಶ್ರೀ ದೇವಪ್ಪಜ್ಜನವರು , ಹುಬ್ಬಳ್ಳಿ, ಕೆ.ವ್ಹಿ. ನಾಗರಾಜಮೂರ್ತಿ, ಬೆಂಗಳೂರು, ಪ್ರಕಾಶ ದೇಶಪಾಂಡೆ ಹುಕ್ಕೇರಿ, ಮಂಜುಳಾ ಹುಲ್ಲ, ಬೆಳಗಾವಿ ಇವರುಗಳನ್ನು ಕನ್ನಡ ನುಡಿಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಏಷ್ಯನ್ ಕ್ರೀಡಾ ಕೂಟದ ಪ್ರಶಸ್ತಿ ವಿಜೇತೆ(ಕುರಾಷ)ಕು.ಮಲಪ್ರಭಾ ಜಾಧವ ಅವರನ್ನು ಮತ್ತು ಘೋಡಗೇರಿಯ ಸರಿಗಮಪ ಸ್ಪರ್ಧಿ ಲಕ್ಷ್ಮೀ ತಳವಾರ ಅವರನ್ನು ಸಮ್ಮಾನಿಸಲಾಗುತ್ತಿದೆ.
7 ರಂದು ಸಂಜೆ 5 ಗಂಟೆಗೆ ಸೇವಾರತ್ನ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ಅಥಣಿ ಮೋಟಗಿಮಠದ ಶ್ರೀ ಚನ್ನಬಸವ ಸ್ವಾಮಿಜಿ ವಹಿಸುವರು. ಹುಲ್ಲೋಳಿಹಟ್ಟಿ-ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಕೈವಲ್ಯಾನಂದ ಸ್ವಾಮಿಜಿ ಸಮ್ಮುಖದಲ್ಲಿ ಖಾರ್ಯಕ್ರಮ ಜರುಗಲಿದೆ.ಈ ಸಂದರ್ಭದಲ್ಲಿ ಸೇವಾರತ್ನ ಪ್ರಶಸ್ತಿಯನ್ನು
ಶಂಕರ ದೇವನೂರು, ಮೈಸೂರು, ಡಾ. ಹೆಚ್. ಬಿ. ರಾಜಶೇಖರ, ಬೆಳಗಾವಿ, ಡಾ. ವ್ಹಿ. ಡಿ. ಪಾಟೀಲ, ಬೆಳಗಾವಿ, ಡಾ. ಬಿ. ಎಫ್. ದಂಡಿನ, ಗದಗ , ಡಾ. ಬಿ. ವ್ಹಿ. ಗುಂಜೆಟ್ಟಿ, ಧಾರವಾಡ, ವ್ಹಿ. ಸಿ. ಐರಸಂಗ, ಧಾರವಾಡ , ಜಯದೇವಪ್ಪ ಜೈನಕೇರಿ, ಶಿವಮೊಗ್ಗ, ಡಾ. ಉಜ್ವಲಾ ಹಿರೇಮಠ, ಧಾರವಾಡ, ಪ್ರೊ. ಎಸ್. ಎಸ್. ಹರ್ಲಾಪುರ, ಧಾರವಾಡ, ಎಂ.ಎಂ. ಸಂಗಣ್ಣವರ, ಹುಣಸೀಕಟ್ಟಿ ಇವರುಗಳಿಗೆ ನೀಡಿ ಗೌರವಿಸಲಾಗುವುದು.
ಮಕ್ಕಳ ಸಾಹಿತ್ಯಕ್ಕಾಗಿ ಸ್ಥಾಪಿತವಾಗಿರುವ ಪ್ರಶಸ್ತಿಗಳಾದ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ತಯಬ್‌ಅಲಿ ಅ. ಹೊಂಬಳ, ಗದಗ ಅವರಿಗೆ ಮತ್ತು ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿಯನ್ನು ಡಾ. ಜಯಶ್ರೀ ಎಸ್. ಮುದಿಗೌಡರ, ಧಾರವಾಡ ಅವರಿಗೆ ನೀಡಿ ಗೌರವಿಸಲಾಗುವುದು.ಇದೇ ಸಂದರ್ಭದಲ್ಲಿ ಉಪನಿರ್ದೇಶಕರು, ತರಬೇತಿ ಮತ್ತು ಉದ್ಯೋಗ ಇಲಾಖೆ, ಡಾ. ಬಸವಪ್ರಭು ಹಿರೇಮಠ, ವಿಮಲವ್ವ ಜಗಜಂಪಿ ಬೆಳಗಾವಿ ಇವರುಗಳನ್ನು ಸನ್ಮಾನಿಸಲಾಗುವುದು.
8 ರಂದು ಮುಂಜಾನೆ 10.30ಕ್ಕೆ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಅಕ್ಕನ ಬಳಗ ಹನುಮನ ಬೀದಿ, ಬೆಳಗಾವಿ, ಶ್ರೀ ಪ್ರಭುದೇವ ಪ್ರತಿಷ್ಠಾನ -ಮಾತೃಮಂಡಳಿ, ಬೆಳಗಾವಿ,ಪಂ. ಸೋಮಶೇಖರ ಮರಡಿಮಠ, ಧಾರವಾಡ,ವಿದುಷಿ, ರೋಹಿಣಿ,ಗಂಗಾಧರಯ್ಯ, ಬೆಳಗಾವಿ, ಸುನೀತ ಪಾಟೀಲ, ಬೆಳಗಾವಿ, ನಯನಾ ಗಿರಿಗೌಡರ, ಬೆಳಗಾವಿ ಇವರಿಂದ ಸ್ವರ ನಮನ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮಗಳಲ್ಲಿ ವಿವಿಧ ಲೇಖಕರ ಗ್ರಂಥಗಳಾದ ಅನುಭಾವದಡಿಗೆ(ಲೇಃ ಡಾ. ಸಿದ್ಧರಾಮ ಸ್ವಾಮಿಗಳು), ಭಾರತೀಯ ತತ್ವಶಾಸ್ತ್ರ ವಿಮರ್ಶಾತ್ಮಕ ಅಧ್ಯಯನ (ಅನುಃ ಡಾ. ಸಿದ್ಧರಾಮ ಸ್ವಾಮಿಗಳು), ವಚನಾರ್ಥ ಚಿಂತನ [ಪರಿಷ್ಕೃತ ಮುದ್ರಣ](ಲೇಃ ಡಾ. ಸಿದ್ಧರಾಮ ಸ್ವಾಮಿಗಳು), ಲಿಂಗಾಯತ ಧರ್ಮ(ಲೇಃ ಆರ್. ಪಿ. ಅಪರಾಜ), ಕೊನೆಯ ದಿ(ಲೇಃ ಡಾ. ವಿ. ಕೃ. ಗೋಕಾಕ) ಮುಂತಾದ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button