ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಮೂರನೇ ದಿನ
‘ಟ್ರೂಥ್’ ನಿಯತಕಾಲಿಕೆಯ ಸಂಪಾದಕರು ಹಾಗೂ ‘ಶಾಸ್ತ್ರ-ಧರ್ಮ ಪ್ರಚಾರ ಸಭೆ’ಯ ಸದಸ್ಯರಾದ ಡಾ. ಶಿಬನಾರಾಯಣ ಸೇನ ಮಾತನಾಡುತ್ತಾ, “ಬಂಗಾಲದಲ್ಲಿ ಹಿಂದೂಗಳಿಗೆ ಜೀವಿಸಲೂ ಕಠಿಣವಾಗಿದೆ. ಈ ಸ್ಥಿತಿಯಲ್ಲಿ ಬಂಗಾಲದಲ್ಲಿ ಆಗುತ್ತಿರುವ ರಾಜಕೀಯ ಪರಿವರ್ತನೆಯು ಆಧ್ಯಾತ್ಮಿಕ ಶಕ್ತಿಯಿಂದಲೇ ಆಗುತ್ತಿದೆ. ರಾಜಕೀಯ ವ್ಯಕ್ತಿ ಇದನ್ನು ಸ್ವೀಕರಿಸುವುದಿಲ್ಲ; ಆದರೆ ವಾಸ್ತವದಲ್ಲಿ ಇದೇ ಆಗಿದೆ”, ಎಂದರು.
ಅಸ್ಸಾಂನ ಸ್ವಾಮಿ ವಿವೇಕಾನಂದ ಕೇಂದ್ರದ ರಾಣು ಬೊರಾಹ ಮಾತನಾಡುತ್ತಾ, “ಬಾಂಗ್ಲಾದೇಶದಿಂದ ಬಹುದೊಡ್ಡ ಪ್ರಮಾಣದಲ್ಲಿ ಮತಾಂಧರು ಅಸ್ಸಾಂ ರಾಜ್ಯಕ್ಕೆ ಬರುತ್ತಿದ್ದಾರೆ. ಅಸ್ಸಾಂದಲ್ಲಿ ೯ ಜಿಲ್ಲೆಗಳಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದು ಅವರ ಸಂಖ್ಯೆಯು ಶೇ. ೮೦ ಕ್ಕಿಂತ ಹೆಚ್ಚಿದೆ”, ಎಂದರು.
ದೇಶದಲ್ಲಿ ಜಿಹಾದಿಗಳ ದೊಡ್ಡ ಜಾಲಗಳನ್ನು ನಿರ್ಮಿಸಲಾಗುತ್ತಿದೆ, ಇಸ್ಲಾಮಿ ದೇಶಗಳಿಂದ ಶಿಷ್ಯವೇತನ ಪಡೆದು ಮತಾಂಧ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಾರೆ ಮತ್ತು ಇಲ್ಲಿನ ಹಿಂದೂ ಹೆಣ್ಣುಮಕ್ಕಳನ್ನು ‘ಲವ್ ಜಿಹಾದ್’ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಇದರ ಬಗ್ಗೆ ದೊಡ್ಡ ಜಾಗೃತಿ ಮಾಡುವ ಆವಶ್ಯಕತೆ ಇದೆ, ಎಂದು ಉತ್ತರ ಪ್ರದೇಶದ ಗಾಝಿಯಾಬಾದ್ದಲ್ಲಿನ ಸಾಂಸ್ಕೃತಿಕ ಗೌರವ ಸಂಸ್ಥಾನದ ಅಧ್ಯಕ್ಷರಾದ ವಿನೋದಕುಮಾರ ಸರ್ವೋದಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅವರು ‘ಹಿಂದೂ ರಾಷ್ಟ್ರ ಕಾರ್ಯ’ ಈ ಸತ್ರದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಛತ್ತೀಸಗಡದಲ್ಲಿನ ರಾಷ್ಟ್ರೀಯ ಸ್ವಾಭಿಮಾನಿ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸತೀಶ ತ್ರಿಪಾಠಿಯವರು ಮಾತನಾಡುತ್ತಾ, “ದೇಶದಲ್ಲಿ ಯಾವ ಪ್ರದೇಶದಲ್ಲಿ ಜಾತಿ ಆಧಾರಿತ ರಾಜಕೀಯ ಮಾಡಲಾಯಿತೋ ಅಲ್ಲಿ ನಮ್ಮ ಜಾತಿ ವ್ಯವಸ್ಥೆಯನ್ನು ಕ್ಷೀಣಿಸುವ ಕೃತ್ಯವಾಯಿತು. ಪ್ರಾಚೀನ ಗ್ರಾಮ ವ್ಯವಸ್ಥೆಯಲ್ಲಿ ವರ್ಣಾಶ್ರಮ ವ್ಯವಸ್ಥೆ ಇದ್ದುದರಿಂದ ಅದು ಆದರ್ಶಪ್ರಾಯವಾಗಿತ್ತು. ಆ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಇನ್ನೊಬ್ಬರ ಕಾಳಜಿ ವಹಿಸುತ್ತಿದ್ದರಿಂದ ಅದು ಸ್ವಾವಲಂಬಿಯಾಗಿತ್ತು”, ಎಂದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಹಾಗೂ ಉತ್ತರ-ಪೂರ್ವ ಭಾರತ ಮಾರ್ಗದರ್ಶಕ ಪೂ. ನೀಲೇಶ ಸಿಂಗಬಾಳರವರು ಪ್ರಯಾಗರಾಜ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ-ಜಾಗರಣ ಮತ್ತು ಹಿಂದೂ ಸಂಘಟನೆ’ ಇವುಗಳಿಗಾಗಿ ಮಾಡಿದ ಕಾರ್ಯದ ವರದಿಯನ್ನು ಮಂಡಿಸಿದರು. ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸದ್ಗುರು ನಂದಕುಮಾರ ಜಾಧವ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತರಬೇತಿ ಉಪಕ್ರಮದ ಮಹತ್ವ ಮತ್ತು ಸಾಮೂಹಿಕ ಯೋಜನೆಯ ದಿಶೆ’ ಇವುಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ