ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆ ವಾರ್ಡ ಸಂಖ್ಯೆ ೧೯ ಹಾಗೂ ರಾಯಬಾಗ ತಾಲೂಕಿನ ಮುಗಳಖೋಡ ವಾರ್ಡ ಸಂಖ್ಯೆ ೦೨ ರ ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳಾದ ಡಾ. ವಿಶಾಲ. ಆರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಪುರಸಭೆ ಸದಲಗಾ ವಾರ್ಡ ಸಂಖ್ಯೆ-೧೯ (ಪರಿಶಿಷ್ಟ ಜಾತಿ ಮಹಿಳೆ) ಹಾಗೂ ರಾಯಬಾಗ ತಾಲೂಕಿನ ಪುರಸಭೆ ಮುಗಳಖೋಡ ವಾರ್ಡ ಸಂಖ್ಯೆ ೦೨ (ಸಾಮಾನ್ಯ) ಸದಸ್ಯ ಸ್ಥಾನಗಳಿಗೆ ಮೇ ೨೯ ರಂದು ಚುನಾವಣೆ ಜರುಗಲಿದೆ.
ಚುನಾವಣೆ ವೇಳಾಪಟ್ಟಿ: ಉಪಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ ಮೇ ೧೬, ನಾಮಪತ್ರಗಳನ್ನು ಪರಿಶೀಲಿಸುವ ದಿನ ಮೇ ೧೭, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಮೇ ೨೦, ಮತದಾನ ಅವಶ್ಯವಿದ್ದರೆ, ಮತದಾನನ್ನು ನಡೆಸಬೇಕಾದ ದಿನ ಮೇ ೨೯ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ, ಮರು ಮತದಾನ ಇದ್ದಲ್ಲಿ ಮೇ ೩೦ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ, ಮತಗಳ ಏಣಿಕೆಯ ದಿನ ಮೇ ೩೧ ರಂದು ಬೆಳಿಗ್ಗೆ ೮ ಗಂಟೆಯಿಂದ ಪ್ರಾರಂಭ ತಾಲೂಕಿನ ಕೇಂದ್ರ ಸ್ಥಾನದಲ್ಲಿ, ಮೇ ೩೧ ರೂಳಗಾಗಿ ಚುನಾವಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಉಪಚುನಾವಣೆ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿಗಳಾದ ಡಾ.ವಿಶಾಲ.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ