Latest

ಪ್ರಧಾನಿ ಕಲಬುರ್ಗಿ ಸಮಾವೇಶ ಮತ್ತೆ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿಯವರ ಕಲಬುರ್ಗಿ ಪ್ರವಾಸ ಎರಡನೇ ಬಾರಿಗೆ ಮುಂದೂಡಲ್ಪಟ್ಟಿದೆ.

Home add -Advt

ಅವರು ಮಾರ್ಚ್ 1ರ ಬದಲು 7ರಂದು ಕಲಬುರ್ಗಿಗೆ ಭೇಟಿ ನೀಡಲಿದ್ದಾರೆ. ಮೋದಿ ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕಳೆದ 17ರಂದು ಕಲಬುರ್ಗಿಗೆ ಬರಬೇಕಿತ್ತು. ಆದರೆ ಪ್ರವಾಸವನ್ನು ಮಾರ್ಚ್ 1ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಒಂದು ವಾರ ಮುಂದೂಡಲಾಗಿದೆ.

ಫೆಬ್ರವರಿ 10ರಂದು ಪ್ರಧಾನಿ ಹುಬ್ಬಳ್ಳಿಗೆ ಆಗಮಿಸಿದ್ದರು. ಅಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅವರು ಅಧಿಕೃತ ಚಾಲನೆ ನೀಡಿದ್ದರು.

ಕಲಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಪಣ ತೊಟ್ಟಿರುವ ಬಿಜೆಪಿ ಪ್ರಧಾನಿಯಿಂದಲೇ ಅಲ್ಲಿನ ಪ್ರಚಾರಕ್ಕೆ ಚಾಲನೆ ನೀಡಲು ನಿರ್ಧರಿಸಿದೆ.

ಬಿಜೆಪಿ ಈಗಾಗಲೆ ಕರ್ನಾಟಕದಲ್ಲಿ ಚುನಾವಣೆ ಪ್ರಚಾರಕ್ಕೆ ಭರದ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಈಗಾಗಲೆ ಕಣಕ್ಕಿಳಿದಿದ್ದಾರೆ.

Related Articles

Back to top button