Latest

ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಅಸೋಶಿಯೇಶನ ಆಫ್ ಇಂಟಲೆಕ್ಷುಯಲ್ ಕಂಪ್ಯೂಟರ ಸೈನ್ಸ ಆಂಡ್ ಇಂಜಿನಿಯರಿಂಗ ಸ್ಟೂಡೆಂಟ್ಸ್ ವತಿಯಿಂದ ಒಂದು ದಿನದ ಡಿಜಿಟಲ್ ಮಾರ್ಕೆಟಿಂಗ ಮತ್ತು ಎಸ್‌ಇಓ ಟೂಲ್ಸ್ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.

ಪ್ರಾಚಾರ್ಯ ಡಾ. ಸಿದ್ಧರಾಮಪ್ಪ ಇಟ್ಟಿ ಕಾರ್ಯಾಗಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ಎ ಡಿಜಿಟಲ್ಸ್‌ನ ಪ್ರವೀಣ ಆಗಮಿಸಿದ್ದರು.

ಕಂಪ್ಯೂಟರ್ ಸೈನ್ಸ ಆಂಡ್ ಇಂಜನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಆರ್.ಉಡುಪಿ ಸ್ವಾಗತಿಸಿದರು. ಪ್ರೊ.ಶ್ರೀಧರ ನಿರಡಿ ಮತ್ತು ಪ್ರೊ. ಚೈತ್ರಶ್ರೀ ಕುರ್ತುಕೋಟಿ ಕಾರ್ಯಾಗರವನ್ನು ಆಯೋಜಿಸಿದ್ದರು. ವಿಭಾಗದ ಎಲ್ಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ನೌಶಿನ ಪಠಾಣ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button