Latest

ಬೆಳಗಾವಿಯಲ್ಲಿ ಅಬ್ಬರಿಸಿದ ಮಳೆ: ಕೆಲವೆಡೆ ಅನಾಹುತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬುಧವಾರ ಮಧ್ಯಾಹ್ನ ಬೆಳಗಾವಿಯಲ್ಲಿ ಸುಮಾರು ಒಂದು ಗಂಟೆ ಕಾಲ ಅಬ್ಬರದ ಮಳೆ ಸುರಿದಿದೆ. ಆನಿಕಲ್ಲು, ಗುಡುಗು ಸಹಿತ ಮಳೆ ಬಿದ್ದಿದ್ದು, ವಾಹನ ಸಂಚಾರ ಹಾಗೂ ಜನಜೀವನಕ್ಕೆ ಅಡಚಣೆ ಉಂಟಾಯಿತು. 

ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮಳೆ ಆರಂಭವಾಗಿದೆ. ಅನಿರೀಕ್ಷಿತವಾಗಿ ಬಂದ ಮಳೆಯಿಂದಾಗಿ ಸಾರ್ವಜನಿಕರು ಪರದಾಡಬೇಕಾಯಿತು. ಕಾಳಿ ಅಂಬ್ರಾಯಿ ಬಳಿ ಮರವೊಂದು ಕಂಪೌಂಡ್ ವಾಲ್ ಮೇಲೆ ಬಿದ್ದು ಧಕ್ಕೆಯಾಗಿದೆ. ವಿದ್ಯುತ್ ಕಂಬ ಕೂಡ ವಾಲಿದೆ. 

ಸೋಮವಾರ ಸಂಜೆ ಕೂಡ ಗಂಟೆಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು. 

Home add -Advt

ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಅಬ್ಬರದ ಮಳೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button