Latest

ಬೆಳಗಾವಿಯಲ್ಲಿ ಮತ್ತೆ 25 ಆಟೋ ಜಪ್ತಿ, 40 ಆಟೋ ವಿರುದ್ದ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ನಗರ ಪೊಲೀಸ್ ಮತ್ತು ಸಾರಿಗೆ ಇಲಾಖೆ (ಆರ್‌ಟಿಓ) ಅಧಿಕಾರಿಗಳು  ಮಂಗಳವಾರವೂ ಜಂಟಿ ಕಾರ್ಯಾಚರಣೆ ಮುಂದುವರಿಸಿದ್ದು, ನಿಯಮ ಉಲ್ಲಂಘಿಸಿದ 25 ಅಟೋರಿಕ್ಷಾಗಳನ್ನು ಜಪ್ತು ಮಾಡಿದ್ದಾರೆ. ಅಲ್ಲದೆ, 40 ಅಟೋರಿಕ್ಷಾಗಳ ವಿರುದ್ಧ   ಪ್ರಕರಣ ದಾಖಲಿಸಿದ್ದಾರೆ.

Home add -Advt

ಮೀಟರ ಅಳವಡಿಸದಿರುವ, ಬಾಡಿಗೆ ತಿರಸ್ಕರಿಸಿದ ಬಗ್ಗೆ ಹಾಗೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಬಾಡಿಗೆಗೆ ಒತ್ತಾಯಿಸುವ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸದಿರುವ ಬಗ್ಗೆ  ಹಲವು ದೂರುಗಳು ಕೇಳಿ ಬಂದಿದ್ದರ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಕಮೀಷನರೆಟ್‌ನ ಸಂಚಾರ ವಿಭಾಗ ಪೊಲೀಸ್ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ(ಆರ್‌ಟಿಓ) ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಕಾರ್ಯಾಚರಣೆ ನಡೆಸಿದರು. ಸೋಮವಾರ 50 ಆಟೋರಿಕ್ಷಾ ಜಪ್ತು ಮಾಡಿ, 25 ಆಟೋಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. 

50 ಆಟೋ ಜಪ್ತು, 25 ಆಟೋಗಳ ವಿರುದ್ಧ ಪ್ರಕರಣ

Related Articles

Back to top button