ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಿಂದ ಶೀಘ್ರವೇ ಕಾರ್ಗೋ ವಿಮಾನ ಸೇವೆ ಆರಂಭವಾಗಲಿದ್ದು, ಈ ಸಂಬಂಧ ಗುರುವಾರ ಬೆಳಗಾವಿಯಲ್ಲಿ ಸಭೆ ನಡೆಯಲಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ಜನೆವರಿ 3ರಂದು ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ.
ಈ ಕುರಿತು ಮುಂದಿನ ಕ್ರಮಕ್ಕಾಗಿ ಗುರುವಾರ ಉನ್ನತ ಅಧಿಕಾರಿಗಳು ಬೆಳಗಾವಿಗೆ ಬರಲಿದ್ದು, ಅಧಿಕಾರಿಗಳು ಹಾಗೂ ಪಾಲುದಾರರ ಸಭೆ ನಡೆಸಲಿದ್ದಾರೆ.
ಬೆಳಗಾವಿಯ ಹಳೆಯ ವಿಮಾನ ನಿಲ್ದಾಣ ಕಟ್ಟಡ ಬಳಸಿಕೊಂಡು ಕಾರ್ಗೋ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಇಲ್ಲಿ ಸ್ಕ್ರೀನಿಂಗ ಮತ್ತು ಎಕ್ಸ್ ರೇ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಆರಂಭದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನ, ತರಕಾರಿ, ಹಣ್ಣು, ಹೂವು ಮೊದಲಾದ ಉತ್ಪನ್ನಗಳನ್ನು ಸಾಗಿಸಲಾಗುತ್ತದೆ.
ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಕಾರ್ಗೋ ಸೇವೆ ದೊರೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ