Latest

ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೆ ಎಲ್. ಇ. ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸಂಗೀತ ವಿಭಾಗದ ವತಿಯಿಂದ  ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಸತತ 8 ವರ್ಷದಿಂದ ಸಂಗೀತ ವಿಭಾಗವು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಹದಿನೈದು ದಿನಗಳ ಕಾಲ ಮಕ್ಕಳಿಗಾಗಿ ಸಂಗೀತ ಬೇಸಿಗೆ ಶಿಬಿರ ನಡೆಸುತ್ತಾ ಬಂದಿದ್ದು ಇದರಲ್ಲಿ ಭರತನಾಟ್ಯ ಹಾಡುಗಾರಿಕೆ ಕಲಿಸಲಾಗುವುದು. ಹದಿನೈದು ದಿನಗಳ ಕಾಲ ಮಕ್ಕಳಿಗೆ ಪ್ರತಿ ದಿನ ನಿರಂತರ ಶಿಬಿರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ವರ್ಷದ ಎಪ್ಪತ್ತು ಮಕ್ಕಳು ಭಾಗವಹಿಸಿದ್ದು ಕನ್ನಡ, ಮರಾಠಿ, ಹಿಂದಿ, ಕೊಂಕಣಿ ಭಾಷೆಗಳಲ್ಲಿ ಸಂಗೀತ ವಿಭಾಗದ ಎಲ್ಲ ಪ್ರಾಧ್ಯಾಪಕರಿಂದ ತರಬೇತಿ ನೀಡಲಾಯಿತು. ಹಾಗೆಯೇ ಭರತನಾಟ್ಯದಲ್ಲಿ ಗಣೇಶನ ಪ್ರಾರ್ಥನಾ ನೃತ್ಯ ಜನಪದ ನೃತ್ಯಗಳನ್ನು ತರಬೇತಿ ನೀಡಲಾಯಿತು. ಹದಿನೈದು ದಿನಗಳು ಮಕ್ಕಳು ಕಲಿತಿದ್ದು ಕೊನೆಯ ದಿನ ಸಮಾರೋಪ ಸಮಾರಂಭದಲ್ಲಿ ಎಲ್ಲ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು .

Home add -Advt

ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ವಾಯ್ಸ್ ಚಾನ್ಸಲರ್ ಡಾಕ್ಟರ್ ವಿವೇಕ್ ಸಾವಜಿ ಉಪಸ್ಥಿತರಿದ್ದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಸಂಗೀತ ವಿದ್ಯೆ ಅತ್ಯಂತ ಕಠಿಣವಾದ ವಿದ್ಯೆ. ಇಂತಹರದಲ್ಲಿ ಮಕ್ಕಳು 15 ದಿನಗಳ ಕಾಲ ಭರತನಾಟ್ಯ ಹಾಗೂ ಎಲ್ಲಾ ಭಾಷೆಗಳ ಹಾಡುಗಳನ್ನು ಹಾಡುವುದು ಆಶ್ಚರ್ಯಕರವಾದ ಸಂಗತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ ಸ್ನೇಹಾ ರಾಜೂರಿಕರ್ ಪ್ರಾಧ್ಯಾಪಕರಾದ ಸುನೀತಾ ಕೆ ಪಾಟೀಲ, ಡಾಕ್ಟರ್ ದುರ್ಗಾ ನಾಡಕರ್ಣಿ, ಸೀಮಾ ಕುಲಕರ್ಣಿ, ಭರತನಾಟ್ಯ ಶಿಕ್ಷಕಿ ಪ್ರತೀಕ್ಷಾ ಹಿರೇಮಠ್ ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮಕ್ಕೆ ತಬಲಾ  ಜಿತೆಂದ್ರ ಸಾಬಣ್ಣವರ ಹಾಗೂ ಹಾರ್ಮೋನಿಯಂ  ಯಾದವೇಂದ್ರ ಪೂಜಾರಿ ಹಾಗೂ ಶ್ರೀವತ್ಸ ಮೃತ್ಯುಂಜಯ್ ಮಾಸ್ತಮರಡಿ ಸಾತ್ ನೀಡಿದರು.  ಸುನೀತಾ ದೇಸಾಯಿ ನಿರೂಪಿಸಿದರು.

Related Articles

Back to top button