Latest

ಮಂಗಳವಾರ 2ನೇ ಹಂತದ ಮತದಾನ: ತಪ್ಪದೆ ಮತ ಚಲಾಯಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಮಂಗಳವಾರ 2ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.

28,022 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು, 2,43,03,279 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. 9 ಜನರು ಹಾಲಿ ಸಂಸದರು ಸೇರಿದಂತೆ ಹಲವು ಘಟಾನುಘಟಿಗಳು ಚುನಾವಣೆ ಕಣದಲ್ಲಿದ್ದಾರೆ. ಬಿಜೆಪ್ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದು, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ಗುಲ್ಬರ್ಗ, ದಾವಣಗೆರೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿದ್ದಾರೆ. ಶಿವಮೊಗ್ಗ, ವಿಜಯಪುರ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ.

2ನೇ ಹಂತದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಷ್ಠೆ ಅಡಗಿದೆ. 14 ಲೋಕಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದರಿದ್ದಾರೆ.

ಕಣದಲ್ಲಿರುವ ಪ್ರಮುಖರು : ಲೋಕಸಭಾ ಕಾಂಗ್ರೆಸ್ ನಾಯಕ, ಇಬ್ಬರು ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳ ಇಬ್ಬರು ಪುತ್ರರು. ಮಾಜಿ ಕೇಂದ್ರ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ.

* ಶಿವಮೊಗ್ಗ : ಬಿ.ವೈ.ರಾಘವೇಂದ್ರ (ಬಿಜೆಪಿ), ಮಧು ಬಂಗಾರಪ್ಪ (ಕಾಂಗ್ರೆಸ್‌-ಜೆಡಿಎಸ್) * ಗುಲ್ಬರ್ಗ : ಡಾ.ಉಮೇಶ್ ಜಾಧವ್ (ಬಿಜೆಪಿ), ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್‌-ಜೆಡಿಎಸ್) * ಬೀದರ್ : ಭಗವಂತ ಖೂಬಾ (ಬಿಜೆಪಿ), ಈಶ್ವರ ಖಂಡ್ರೆ (ಕಾಂಗ್ರೆಸ್‌-ಜೆಡಿಎಸ್) * ಉತ್ತರ ಕನ್ನಡ : ಅನಂತ್ ಕುಮಾರ ಹೆಗಡೆ (ಬಿಜೆಪಿ), ಆನಂದ ಅಸ್ನೋಟಿಕರ (ಕಾಂಗ್ರೆಸ್‌-ಜೆಡಿಎಸ್) * ಬಾಗಲಕೋಟೆ : ಪಿ.ಸಿ.ಗದ್ದಿಗೌಡರ್ (ಬಿಜೆಪಿ), ವೀಣಾ ಕಾಶಪ್ಪನವರ್ (ಕಾಂಗ್ರೆಸ್-ಜೆಡಿಎಸ್). ಬೆಳಗಾವಿ: ಸುರೇಶ ಅಂಗಡಿ (ಬಿಜೆಪಿ), ವಿ.ಎಸ್.ಸಾಧುನರ್ (ಕಾಂಗ್ರೆಸ್-ಜೆಡಿಎಸ್), ಚಿಕ್ಕೋಡಿ: ಪ್ರಕಾಶ ಹುಕ್ಕೇರಿ (ಕಾಂಗ್ರೆಸ್), ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ), ಧಾರವಾಡ: ಪ್ರಹಲ್ಲಾದ ಜೋಶಿ (ಬಿಜೆಪಿ), ವಿನಯ ಕುಲಕರ್ಣಿ (ಕಾಂಗ್ರೆಸ್) ಇತ್ಯಾದಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button