Latest

ಮಮತಾ ಬ್ಯಾನರ್ಜಿ ಹೆಸರಲ್ಲಿ ಡೆತ್ ನೋಟ್ ಬರೆದಿಟಿದಿಟ್ಟಿದ್ದ ಗೌರವ್ ದತ್

ಪ್ರಗತಿವಾಹಿನಿ ಸುದ್ದಿ, ಕೋಲ್ಕತ್ತಾ

ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

1986ನೇ ಬ್ಯಾಚ್ ಅಧಿಕಾರಿಯಾಗಿದ್ದ ಅವರು ಕಳೆದ ವರ್ಷ ನಿವೃತ್ತಿ ಹೊಂದಿದ್ದರು. ಫೆ.19ರಂದು ಆತ್ಮಹತ್ಯೆಗೆ ಶರಣಾಗಿದ್ದರು.

ಅವರಿಗೆ ಸಂಬಂಧಿಸಿದ 2 ಫೈಲ್ ಗಳನ್ನು ಕ್ಲಿಯರ್ ಮಾಡದೆ ಮಮತಾ ಬ್ಯಾನರ್ಜಿಯವರು ಸತಾಯಿಸುತ್ತಿದ್ದರು ಎನ್ನಲಾಗಿದೆ. ಅವಮಾನದೊಂದಿಗೆ ಬದುಕುವುದಕ್ಕಿಂತ ಗೌರವ ಯುತವಾಗಿ ಸಾಯುವುದೇ ಲೇಸು ಎಂದು ಅವರು ಬರೆದಿಟ್ಟಿದ್ದಾರೆ.

ಗೌರವ್ ದತ್ ತಂದೆ ಗೋಪಾಲ ದತ್ ಇಂದಿರಾ ಗಾಂಧಿ ಅವರ ಭದ್ರತಾ ಅಧಿಕಾರಿಯಾಗಿದ್ದರು.

Related Articles

Back to top button