Latest

ಯಡಿಯೂರಪ್ಪ ಸಂಧಾನ: ಕತ್ತಿ ಅಸಮಾಧಾನ ತಾತ್ಕಾಲಿಕ ಶಮನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕತ್ತಿ ಸಹೋದರರ ಅಸಮಾಧಾನವನ್ನು ತಾತ್ಕಾಲಿಕವಾಗಿ ಇತ್ಯರ್ಥಪಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಕತ್ತಿ ಸಹೋದರರು ಸೇರಿದಂತೆ ಬಿಜೆಪಿಯ ಸ್ಥಳೀಯ ನಾಯಕರೊಂದಿಗೆ ಮಾತನಾಡಿದ ಯಡಿಯೂರಪ್ಪ, ಚಿಕ್ಕೋಡಿ ಅಭ್ಯರ್ಥಿ ಬದಲಾವಣೆ ಇಲ್ಲ. ಎಲ್ಲರೂ ಕೂಡಿಕೊಂಡು ಕೆಲಸ ಮಾಡಬೇಕೆಂದರು.

Home add -Advt

ಕತ್ತಿ ಸಹೋದರರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದೂ ಅವರು ಹೇಳಿದರು.

ಇದಾದ ನಂತರ ಮಾತನಾಡಿದ ರಮೇಶ ಕತ್ತಿ, ಪಕ್ಷ, ದೇಶ ಎಲ್ಲಕ್ಕಿಂತ ಮುಖ್ಯ. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದರು.

ಆದರೆ, ನಡೆದ ವಿದ್ಯಮಾನಗಳನ್ನು ಗಮನಿಸಿದರೆ, ಯಡಿಯೂರಪ್ಪ ಬೆಳಗಾವಿಗೆ ಕಾಲಿಡುವ ಮುನ್ನವೇ ವಿವಾದ ಇತ್ಯರ್ಥವಾದಂತಿತ್ತು. ದೂರವಾಣಿ ಮೂಲಕವೇ ಮಾತುಕತೆ ನಡೆಸಿ ಸಮಾಧಾನಪಡಿಸಿದಂತಿತ್ತು.

ಆದರೆ ಅಷ್ಟೊಂದು ಗರಂ ಆಗಿದ್ದ ರಮೇಶ ಕತ್ತಿ ಇಷ್ಟು ಬೇಗ ಹೇಗೆ ತಣ್ಣಗಾದರು ಎನ್ನುವುದೇ  ಪ್ರಶ್ನೆಯಾಗಿದೆ. ಅಥವಾ ಯಡಿಯೂರಪ್ಪ ಎದುರು ಯಾವುದೇ ವಿಷಯ ಎತ್ತದೆ ಬೂದಿ ಮುಚ್ಚಿದ ಕೆಂಡದಂತಾದರೇ ಎನ್ನುವ ಸಂಶಯವೂ ಕಾಡುವಂತಾಗಿದೆ.

ಬಿಜೆಪಿ ವಿರುದ್ಧ ಬಂಡಾಯವಿಲ್ಲ -ರಮೇಶ ಕತ್ತಿ

ಕತ್ತಿ ಮುನಿಸು: ನಾಳೆ ಬೆಳಗಾವಿಗೆ ಧಾವಿಸುತ್ತಿರುವ ಯಡಿಯೂರಪ್ಪ

Related Articles

Back to top button