ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಾಡೋಜ ಪ್ರತಿಷ್ಠಾನದ 16ನೆಯ ಸಮ್ಮಾನ್ ಸಮಾರಂಭವು ಇದೇ ಭಾನುವಾರ ನಡೆಯಲಿದೆ.
ವಡಗಾವಿ ರಸ್ತೆಯಲ್ಲಿಯ ಐಎಂಇಆರ್‌ದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿರುವ ಈ ಸಮಾರಂಭದಲ್ಲಿ ರಾ.ನಂ.ಚಂದ್ರಶೇಖರ ಅವರಿಗೆ ಅರವಿಂದ ಸಮ್ಮಾನ್, ಶ್ರೀಪತಿ ಮಂಜನಬೈಲು ಅವರಿಗೆ ಕಾತ್ಯಾಯನಿ ಸಮ್ಮಾನ್, ಎಸ್.ಆರ್.ಮಂಗಳವೇಢ ಅವರಿಗೆ ವೆಂ.ಕೃ ಅಧ್ಯಾಪಕ ಸಮ್ಮಾನ್, ಉಮಾ ಅಂಗಡಿ ಅವರಿಗೆ ಚಿದಂಬರ ದೀಕ್ಷಿತ ಮಾಸ್ತ ಸಮ್ಮಾನ್, ಡಾ.ನೀತಾ ದೇಶಪಾಂಡೆಯವರಿಗೆ ಗುರುನಾಥ ದೀಕ್ಷಿತ ಸಮ್ಮಾನ್ ಹಾಗೂ ಡಾ.ಎಸ್.ರಾಜಶೇಖರ ಅವರಿಗೆ ಗೋವಿಂದ ಮೂರ್ತಿ ದೇಸಾಯಿ ಸಮ್ಮಾನ್‌ಗಳನ್ನು ಪ್ರದಾನ ಮಾಡಲಾಗುವದು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಹಾರಾಷ್ಟ್ರ ಗಡಿ ಕಾನೂನು ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ನ್ಯಾ.ಮೂ. ಕೆ.ಎಲ್.ಮಂಜುನಾಥ ಆಗಮಿಸಲಿದ್ದಾರೆ.
ನಾಡೋಜ ಪ್ರತಿಷ್ಠಾನದ ಅಧ್ಯಕ್ಷರಾದ ಉದ್ದಿಮೆದಾರ ಎಂ.ಜಿ.ಗಲಗಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ