ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಧಾನಮಂಡಳದ ಚಳಿಗಾಲದ ಅಧಿವೇಶನದ 2ನೇ ದಿನವಾದ ಮಂಗಳವಾರ ಕಲಾಪಗಳು ಕಾವೇರುವ ಸಾಧ್ಯತೆ ಇದೆ. ಬೆಳಗ್ಗೆ 10 ಗಂಟೆಗೆ ವಿಧಾನಪರಿಷತ್ ಕಲಾಪ ಹಾಗೂ 11 ಗಂಟೆಗೆ ವಿಧಾನಸಭೆ ಕಲಾಪಗಳು ಶುರುವಾಗಲಿವೆ. 10.30ಕ್ಕೆ ವಿಧಾನಸಭಾ ಕಲಾಪಗಳ ಸಲಹಾ ಸಮಿತಿ ಸಭೆ ನಡೆಯುವುದು. ಮುಖ್ಯಮಂತ್ರಿಗಳು ಇಡೀ ದಿನ ಕಾಲಪದಲ್ಲಿ ಭಾಗವಹಿಸುವರು.
ಮೊದಲ ದಿನ ಕಲಾಪಕ್ಕೆ ಗೈರಾಗಿದ್ದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿದ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಿ ಕಲಾಪದಲ್ಲಿ ಭಾಗವಹಿಸುವರು.
ಮಂಗಳವಾರ ಬಿಜೆಪಿ ರೈತರ ವಿಷಯ ಸೇರಿದಂತೆ ಹಲವಾರು ವಿಷಯಗಳಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಪಂಚ ರಾಜ್ಯಗಳ ಚುನಾವಣೆ ಫಲಿತಂಶ ಹೊರಬರಲಿದ್ದು, ಇದು ಕೂಡ ಕಲಾಪದಲ್ಲಿ ಪರಸ್ಪರ ಕಾಲೆಳೆಯಲು ಕಾರಣವಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ