Latest

ವಿಶ್ವಕ್ಕೆ ಮಾರ್ಗದರ್ಶ ನೀಡುವುದಕ್ಕಾಗಿ ಭಾರತ ಜನ್ಮ ತಾಳಿದೆ -ಕಾನಿಟ್ಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾರತ ಈಗಾಗಲೆ ವಿಶ್ವಗುರುವಾಗಿದ್ದು, ವಿಶ್ವಕ್ಕೆ ಮಾರ್ಗದರ್ಶ ನೀಡುವುದಕ್ಕಾಗಿ ಭಾರತ ಜನ್ಮ ತಾಳಿದೆ ಎಂದು ಭಾರತೀಯ ಶಿಕ್ಷಣ ಮಂಡಳದ ಕಾರ್ಯದರ್ಶಿ ಮುಖುಲ್ ಕಾನಿಟ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಪ್ರಬುದ್ಧ ಭಾರತ ಆಯೋಜನೆಯ ಸ್ಟೆಪ್ -2018 ಸಮಾವೇಶದಲ್ಲಿ ಭಾನುವಾರ ಶಿಕ್ಷಣಕ್ಕೆ ಸಂಬಂಧಿಸಿದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಫಿನ್ ಲ್ಯಾಂಡ್ ನಂತಹ ರಾಷ್ಟ್ರದಲ್ಲಿ ಪ್ರಾಚೀನ ಭಾರತದ ಗುರುಕುಲ ಪದ್ಧತಿ ಈಗಾಗಲೆ ಬಂದಿದೆ. ಅಲ್ಲಿ ಕಲಾಸ್ ರೂಂ ಪದ್ಧತಿ ಹೋಗಿದೆ. ಆದರೆ ಭಾರತದಲ್ಲಿ ಅದು ಪುನರ್ ನಿರ್ಮಣವಾಗಬೇಕಾದರೆ ನಾವು ಸಂಕಲ್ಪ ಮಾಡಬೇಕಿದೆ. ನಮ್ಮಲ್ಲಿ ಆತ್ಮ ವಿಶ್ವಾಸ ಮೂಡಿದೆ ನಮ್ಮೆಲ್ಲ ಅಂಧಕಾರಗಳೂ ಕ್ಷಣ ಮಾತ್ರದಲ್ಲಿ ದೂರವಾಗಲು ಸಧ್ಯವಿದೆ ಎಂದು ಅವರು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪುನರುತ್ಥಾನ ವಿದ್ಯಾಪೀಠದ ಸಂಸ್ಥಾಪಕಿ ಇಂದುಮತಿ ಕಾಟದಾರೆ, ವ್ಯಕ್ತಿ ವಿಕಾಸ ಮತ್ತು ರಾಷ್ಟ್ರ ನಿರ್ಮಾಣ ಬೇರ ಬೇರೆ ಅಲ್ಲ. ರಾಷ್ಟ್ರ ನಿರ್ಮಾಣ ಗುರಿಯಾಗಿಟ್ಟುಕೊಂಡು ವ್ಯಕ್ತಿ ನಿರ್ಮಾಣ ಮಾಡಬೇಕು. ಈ ದಿಸೆಯಲ್ಲಿ ಶಿಕ್ಷಣ ವ್ಯವಸ್ಥೆ ಪುನರ್ ರೂಪಿತವಾಗಬೇಕು ಎಂದುಹೇಳಿದರು.
ನಾವು ಹಣದ ಆಧಾರದ ಮೇಲೆ ಭವಿಷ್ಯವನ್ನು ಅಳೆಯುತ್ತೇವೆ. ಮನುಷ್ಯ ಕೇವಲ ಹಣ ಗಳಿಸುವ ಯಂತ್ರವಲ್ಲ. ಆರ್ಥಿಕತೆಯ ಆಧಾರದ ಮೇಲೆ ಎಲ್ಲವನ್ನೂ ನಿಯಂತ್ರಿಸುವ ಬದಲು ಧಾರ್ಮಿಕತೆಯ ಆಧಾರದ ಮೇಲೆ ನಿಯಂತ್ರಣ ಮಾಡಬೇಕು. ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳಬೇಕು. ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲೂ ಪರಿವರ್ತನೆಯಾಗಬೇಕು. ಎಲ್ಲದಕ್ಕೂ ಅಮೇರಿಕಾ ಮಾದರಿ ಅನುಸರಿಸುವುದನ್ನು ನಿಲ್ಲಿಸಬೇಕು. ಭಾರತೀಯ ಪದ್ಧತಿಯೇ ನಮಗೆ ಆದರ್ಶವಾಗಬೇಕು ಎಂದು ಅವರು ಹೇಳಿದರು.
ವರ್ಷದಿಂದ ವರ್ಷಕ್ಕೆ ದುರ್ಬಲ ಮಕ್ಕಳು ಹುಟ್ಟುತ್ತಿದ್ದಾರೆ. ಮಾನಸಿಕ ಮತ್ತು ಶಾರೀರಿಕ ದೌರ್ಬಲ್ಯದಿಂದ ಕೂಡಿದ್ದರೆ ಅಂತವರನ್ನು ರೂಪಿಸುವುದು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಜೀವನ ದೃಷ್ಟಿಯ ಮೇಲೆ ಶಿಕ್ಷಣ ರೂಪುಗೊಂಡಾಗ ನಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಶಿಕ್ಷಣದ ಮೂಲಕವೇ ಭಾರತೀಯ ಮನಸ್ಸುಗಳನ್ನು ಗೆಲ್ಲಬಹುದು. ಅಂದಾಗ ಸರ್ವ ಅರ್ಥದಲ್ಲಿ ಸ್ವಾಂತ್ರ್ಯ ಸಾಧ್ಯ ಎಂದು ಇಂದುಮತಿ ಹೇಳಿದರು.
ಡಾ.ಅಲ್ಕಾ ಕಾಳೆ ಗೋಷ್ಠಿ ಸಂಯೋಜಿಸಿದರು.
ಆರ್ಥಿಕ ವಿಷಯಕ್ಕೆ ಸಬಂಧಿಸಿದ ಗೋಷ್ಠಿಯಲ್ಲಿ ಮಾತನಾಡಿದ ಲೇಖಕ ಪ್ರೊ.ಕನಗ ಸಭಾಪತಿ, ಭಾರತದ ಮೂಲೆ ಮೂಲೆಗಳಲ್ಲಿ ಉದ್ಯಮಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಆದರೆ ಅವುಗಳನ್ನು ಗುರುತಿಸುವಲ್ಲಿ, ಅವುಗಳ ಸಮಸ್ಯೆ ಪರಿಹರಿಸುವಲ್ಲಿ ನಾವು ಎಡವುತ್ತಿದ್ದೇವೆ ಎಂದರು.
ಭಾರತೀಯ ಮಹಿಳೆಯರು ಇಲ್ಲಿನ ಉದ್ಯಮ ಬೆಳೆಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎನ್ನುವುದು ಅಧ್ಯಯನದಿಂದ ಗೊತ್ತಾಗಿದೆ.  ಭಾರತದ ಕಾರ್ಯವಿಧಾನವೇ ವಿಶೇಷವಾಗಿದೆ. ಇಲ್ಲಿನ ಪದ್ಧತಿಯನ್ನು ವಿದೇಶಗಳು ಅಳವಡಿಸಿಕೊಳ್ಳುತ್ತಿವೆ. ನಮ್ಮಲ್ಲಿ ಆಡಳಿತಾತ್ಮಕ ಅಂಶಗಳು ಬದಲಾದರೆ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ಅವರು ಹೇಳಿದರು.
ಮಣಿಪುರದ ರಾಜಕೀಯ ವಿಚಾರವಾದಿ ರಜತ್ ಸೇಥಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಆದ ಸುಧಾರಣೆ ಮತ್ತೆಂದೂ ಆಗಿಲ್ಲ. 2013-14ರಲ್ಲಿ ಯುಪಿಎ ಸರಕಾರವಿದ್ದಾಗ ಭಾರತದ ಆರ್ಥಿಕ ಸ್ಥಿತಿ ಕೋಮಾಕ್ಕೆ ಹೋಗಿತ್ತು. ಅದನ್ನು ಸರಿಪಡಿಸಲು ನರೇಂದ್ರ ಮೋದಿ ಸರಕಾರಕ್ಕೆ 5 ವರ್ಷ ಬೇಕಾಯಿತು. ಮೋದಿಯ ವೇಗ ಮತ್ತು ದೂರದೃಷ್ಟಿಗೆ ಇಲ್ಲಿಯ ಜನರು ಓಡಬೇಕಿದೆ ಎಂದು ಹೇಳಿದರು.
ರಾಜೇಂದ್ರ ಬೆಳಗಾಂವ್ಕರ್ ಗೋಷ್ಠಿ ಸಂಯೋಜಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button