ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರದ ಮಾಳಮಾರುತಿಯ ಆಂಜನೇಯ ಅಷ್ಟೋತ್ತರ ಸಂಘ, ಕಾಕತಿಯ ಶ್ರೀ ಹರಿವಾಯು ಗುರುಗಳ ಅಷ್ಟೋತ್ತರ ಸಂಘ, ವಡಗಾವಿಯ ವೆಂಕಟೇಶ್ವರ ಸೇವಾ ಸಂಘ, ವಿಷ್ಣು ಸಹಸ್ರನಾಮ ಮಂಡಳಿ, ಲಕ್ಷ್ಮೇಶ್ವರದ ಮಂತ್ರಾಲಯ ಪಾದಯಾತ್ರಾ ಸಂಘ ಇವುಗಳ ಸಹಯೋಗದೊಂದಿಗೆ ಡಿ. 25 ರಂದು ಕೋನವಾಳ ಬೀದಿಯಲ್ಲಿರುವ ಸುಣಗಾರ ಸಭಾಗೃಹದಲ್ಲಿ ಬೆಳಗ್ಗೆ 7.30ರಿಂದ 8.30ರ ವರೆಗೆ ಶ್ರೀ ಬ್ರಹ್ಮ ಗಾಯತ್ರಿ ಜಪ ಹಾಗೂ 8.30ರಿಂದ 10.30ರ ವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ವಿಶೇಷ ಅಭಿಯಾನವನ್ನು ವಿಶ್ವಕಲ್ಯಾಣಕ್ಕಾಗಿ ಹಾಗೂ ಆತ್ಮೋದ್ಧಾರಕ್ಕಾಗ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಮೊ. ಸಂಖ್ಯೆ 9743441859 ಸಂಪರ್ಕಿಸಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ