ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ
ಶಿವಮೊಗ್ಗದ ಗೌರವ್ ಲಾಡ್ಜ್ ಬಳಿ ರೌಡಿ ಗೊವಿಂದ್ ನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.
ಈತ ಶಿವಮೊಗ್ಗದ ಕುಖ್ಯಾತ ಪಾತಕಿ ಮಾರ್ಕೆಟ್ ಲೋಕಿ ಸಹೋದರ. ಮಾರ್ಕೆಟ್ ಲೋಕಿ ಇತ್ತೀಚೆಗೆ ಮಾರ್ಕೆಟ್ ಗಿರಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ. ಈ ಸಂದರ್ಭದಲ್ಲಿ ಗೋವಿಂದ್ ಕೂಡ ನಾಪತ್ತೆಯಾಗಿದ್ದ.
ಗೋವಿಂದ್ ಮೇಲೆ ಮೂರು ಕೊಲೆ ಪ್ರಕರಣದಲ್ಲಿ ಕೋಕಾ ಕಾಯ್ದೆ ಜಾರಿಯಲ್ಲಿತ್ತು. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,
ಖರಾಬ್ ಶಿವು ಗ್ಯಾಂಗ್ ಕೊಲೆ ಮಾಡಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ