ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಾವಿನಲ್ಲೂ ಸಾರ್ಥಕತೆ ಮೆರೆದ ದೇಹ ದಾನಿ ಪಾರ್ವತಿ ಮಹಾದೇವ ತುಳಸೇಕರ(೭೧) ಅನಾರೊಗ್ಯದಿಂದ ನಾಗನೂರ ಶ್ರೀ ಶಿವಬಸವೇಶ್ವರ ಟ್ರಸ್ಟ್ ದ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮದಲ್ಲಿ ನಿಧನರಾದರು.
ಮೃತರ ಕೊನೆಯ ಇಚ್ಚೆಯಂತೆ ತೋಂಟದ ನಾಗನೂರು ಡಾ.ಸಿದ್ಧರಾಮ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅವರ ದೇಹವನ್ನು ವೃದ್ದಾಶ್ರಮದ ಸಂಚಾಲಕ ಎಂ.ಎಸ್. ಚೌಗಲಾ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೆದಿಕ್ ಮೆಡಿಕಲ್ ಕಾಲೇಜ ಹಾಗೂ ಡಾ.ರಾಮಣ್ಣವರ ಪ್ರತಿಷ್ಠಾನದ ಅಕ್ಕ ಮಹಾದೇವಿ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ನೀಡಿದ್ದಾರೆ.
ವಿಶೇಷವೆಂದರೆ ಡಾ. ಮಹಾಂತೇಶ ರಾಮಣ್ಣವರ ತಮ್ಮ ತಂದೆಯ ಮೃತದೇಹ ಛೇದಿಸಿದ ಘಟನೆಯಿಂದ ಪ್ರೇರಣೆಗೊಂಡು ದೇಹಕ್ಕೆ ಕೊಡುವ ಧಾರ್ಮಿಕ ಸಂಸ್ಕಾರಕ್ಕಿಂತಲು ದೇಹದಾನದಿಂದ ಮಾನವ ಕೋಟಿಗೆ ಆಗುವ ಸಂಶೋಧನೆಯ ಲಾಭ ಅತೀ ಶ್ರೇಷ್ಠ ಸಂಸ್ಕಾರವೆಂದು ಮೃತರ ದೃಢಸಂಕಲ್ಪ ಹಾಗೂ ಅನಿಸಿಕೆ ಆಗಿದೆ.
ಪ್ರಾಶುಂಪಾಲ ಡಾ.ಅಂಬಯ್ಯದೇವರು, ಕಾಲೇಜಿನ ಅಧ್ಯಕ್ಷರಾದ ಶಾಂತಪ್ಪ ಜೀ ಪಾಟೀಲ, ಡಾ. ದಿವ್ಯಾ ಪಾಟೀಲ, ಖಜಾಂಚಿ ಡಾ. ಮತೀನ್ ಉಪಸ್ಥಿತರಿದ್ದರು. ವೈದ್ಯಕೀಯ ಮಹಾವಿದ್ಯಾಲಯಗಳ ವೈದ್ಯ ವಿದ್ಯಾರ್ಥಿಗಳು ಪಾರ್ಥಿವ ಶರೀರಕ್ಕೆ ಪುಷ್ಪಗಳನ್ನು ಅರ್ಪಿಸಿ ಧನ್ವಂತರಿ ಸ್ಥವನದೊಂದಿಗೆ ಪೂಜೆ ಪ್ರಾರ್ಥನೆ ಸಲ್ಲಿಸಿ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ದೇಹವನ್ನು ಸ್ವೀಕರಿಸಲಾಯಿತು. ಎಸ್.ಎನ್.ವ್ಹಿ.ವ್ಹಿ ಸಂಸ್ಥೆಯ ಕಾರ್ಯಾದ್ಯಕ್ಷರಾದ ಸಿ.ಎಸ್. ಸಾಧುನವರ, ಪ್ರಾಂಶುಪಾಲರಾದ ಡಾ.ಸುಭಾಸ ಬಾಗಡೆ, ಡಾ. ರಾಮಣ್ಣವರ ಪ್ರತಿಷ್ಠಾದ ಅಧ್ಯಕ್ಷೆ ಡಾ. ಸುಶೀಲಾದೇವಿ ರಾಮಣ್ಣವರ ದೇಹದಾನಕ್ಕೆ ಮುಂದಾಗಿ ಮಾನವೀಯತೆ ಮೆರೆದ ತುಳಸೇಕರ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿ ಮತ್ತು ಇತರರಿಗೆ ಹಂಚಿರಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ