ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಸಾಧುನವರ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ರಾಮದುರ್ಗ ವಿಧಾನಸಭಾ ಕ್ಷೇತ್ರದ ಚಂದರಗಿ, ಗೊಡಚಿ, ನರಸಾಪುರ, ಕಟಕೋಳ ಹನಮಸಾಗರ, ಕಿಲ್ಲಾ ತೊರಗಲ್ಲ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಾಧುನವರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅಶೋಕ ಪಟ್ಟಣ, ಸಂಸದ ಸುರೇಶ ಅಂಗಡಿ ಅವರಿಗೆ ಹದಿನೈದು ವರ್ಷಗಳಲ್ಲಿ ಒಂದು ರೈಲು ಯೋಜನೆಯನ್ನು ಸಹ ತರಲು ಸಾಧ್ಯವಾಗಿಲ್ಲ. ಅವರ ಸಾಧನೆ ಶೂನ್ಯವಾಗಿದ್ದು ಈಗ ಮೋದಿ ನೋಡಿ ಓಟು ಕೊಡಿ ಎಂದು ಕೇಳುತ್ತಿದ್ದಾರೆ. ಬಿಜೆಪಿ ಜನರಿಗಾಗಿ ರೈತರಿಗಾಗಿ ಏನೂ ಮಾಡಲಿಲ್ಲ. ಈ ಬಾರಿ ಮೋದಿ ಅವರ ಸುಳ್ಳು ಭರವಸೆಗಳಿಗೆ ಜನ ಮರುಳಾಗುವುದಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ ಮಾತನಾಡಿ, ಕಾಂಗ್ರೆಸ್ ಪಕ್ಷ ಕಳೆದ ಅರವತ್ತು ವರ್ಷಗಳಿಂದ ದೇಶವನ್ನು ಅಭಿವೃದ್ಧಿಯಿಂದ ಬೆಳಗಿದೆ ಎಂದು ಹೇಳಿದರು.
ಪ್ರಚಾರದ ಸಭೆಯ ಬಳಿಕ ಅಶೋಕ ಪಟ್ಟಣ ಮತ್ತು ಡಾ. ಸಾಧುನವರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ