Latest

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ದೇಶಸೇವೆಗೆ ಮುಂದಾಗಿ -ಸಂಜಯ ಗೋವಿಲ್ಕರ್

   ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ಉಗ್ರವಾದಿ ಅಜ್ಮಲ ಕಸಬನನ್ನು ಜೀವಂತವಾಗಿ ಹಿಡಿದ ಮುಂಬಯಿ ಪೋಲಿಸ್ ಇನಸ್ಪೆಕ್ಟರ್, ವೀರ ಕನ್ನಡಿಗ ಸಂಜಯ ಯಶವಂತ ಗೋವಿಲಕರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ತಮ್ಮ ವಿಭಾಗಕ್ಕೆ ಸಿಮಿತಗೊಳ್ಳದೇ ಕೆ.ಪಿ.ಎಸ್.ಸಿ. ಹಾಗೂ ಯು.ಪಿ.ಎಸ್.ಸಿ ಪರಿಕ್ಷೆಗಳನ್ನು ಪಾಸಾಗಿ ದೇಶ ಸೇವೆಗೆ ಮುಂದಾಗಬೇಕೆಂದರು. ಅವಕಾಶಗಳು ಸಾಕಷ್ಟಿವೆ. ವಿದ್ಯಾರ್ಥಿಗಳು ಮೊಬೈಲ್‌ನ್ನು ಕೇವಲ ಸಮಯವನ್ನು ಪೋಲುಮಾಡಲು ಬಳಸದೇ, ಜ್ಞಾನವನ್ನು ಹೆಚ್ಚಿಸಿಕೊಳ್ಳಲೂ ಬಳಸಿ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ  ಡಾ. ಪ್ರಸಾದ ರಾಂಪೂರೆ, ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಅದುವೆ ನಮ್ಮ ದೇಶಕ್ಕೆ ನಾವು ನೀಡುವ ಸೇವೆ ಎಂದರು.  
1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧ ಸಿದ್ಧಗೌಡಾ ಬಸಗೌಡಾ ಪಾಟೀಲ ಪತ್ನಿ ಸುನೀತಾ ಸಿದ್ಧಗೌಡಾ ಪಾಟೀಲ್ ಅವರನ್ನು ಸತ್ಕರಿಸಲಾಯಿತು. ಕಾವ್ಯಾ ಹಾಗೂ ತಂಡ ದೇಶಭಕ್ತಿಗೀತೆಯನ್ನು ಹಾಡಿದರು. ಜ್ಯೋತಿ ಹಂದಿಗುಂದ ಸ್ವಾಗತಿಸಿದರು.
ಶಿಲ್ಪಾ ಪಟ್ಟೆಕರ ಅಥಿತಿಯನ್ನು ಪರಿಚಯಿಸಿದರು. ಶಿಲ್ಪಾ ವಾರದ ನಿರೂಪಿಸಿದರು. ಪ್ರೊ. ವಿಶಾಲ ದಾನವಾಡೆ ಮತ್ತು ಪ್ರೊ. ಮಂಜುನಾಥ ಶರನಪ್ಪನವರ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿಷ್ಣುಪಂತ ಶಿರಗಾಂವಕರ, ಕಾಜಲ, ಜ್ಞಾನೇಶ್ವರ ಮಾತನಾಡಿದರು. ಚಿಕ್ಕೋಡಿಯ ಕೆ ಎಲ್ ಇ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button