Latest

ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಚವಾಟ್ ಗಲ್ಲಿ ಹಾಗೂ ಕಾಮತ ಗಲ್ಲಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬೆನಕೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ೪ ಲಕ್ಷ ರೂ. ವೆಚ್ಚದಲ್ಲಿ ಚವಾಟ್ ಗಲ್ಲಿ ಹಾಗೂ ಕಾಮತ ಗಲ್ಲಿಯಲ್ಲಿನ ಸ್ಮಶಾನ ಭೂಮಿ ಅಭಿವೃದ್ಧಿ ಹಾಗೂ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆಯೆಂದು ತಿಳಿಸಿದರು.
ಚವಾಟ್ ಗಲ್ಲಿ ಹಾಗೂ ಕಾಮತ ಗಲ್ಲಿಯ ಪಂಚ ಕಮಿಟಿ, ಯಲ್ಲಪ್ಪ ಮೊಹಿತೆ, ರಾಜು ಹಲಗೆಕರ, ರಾಹುಲ ಮುಚಂಡಿ, ರಮೇಶ ತಾಶಿಲ್ದಾರ, ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button