ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜನ್ಮ ದಿನದ ನಿಮಿತ್ತ ಹುಕ್ಕರಿ ಹಿರೇಮಠದ ಬೆಳಗಾವಿ ಶಾಖೆಗೆ ಇಂದು ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಆಶಿರ್ವಾದ ಪಡೆದರು.
ಮತದಾರರಿಗಾಗಿ ಜನ್ಮ ದಿನ ಬದಲಾಯಿಸಿಕೊಂಡ ಲಕ್ಷ್ಮಿ ಹೆಬ್ಬಾಳಕರ್ ನಿರ್ಧಾರವನ್ನು ಹಾಗೂ ಕೇವಲ ಒಂದು ವರ್ಷದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ರೀಗಳು ಪ್ರಶಂಸಿಸಿದರು.
ನಾನು ಕೇವಲ ಭಾಷಣ, ಆಶ್ವಾಸನೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.