Latest

ಅಂಗಡಿ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶ ಭಾರತ. ನಮ್ಮ ದೇಶದ ಗಣತಂತ್ರ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಏಕತೆ, ಸಮಾನತೆ, ಸಹಭಾಳ್ವೆ ತತ್ವಗಳನ್ನು ಆಚರಣೆಯಲ್ಲಿ ತಂದು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ತಿಳಿಸಿದರು.
ಶನಿವಾರ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ನಡೆದ ೭೦ ನೇ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ಸ್ವಾತಂತ್ರ್ಯ ಹಾಗೂ ದೇಶದ ಸಮಗ್ರತೆಗೆ ಒತ್ತು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ನಮ್ಮ ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ಪಾಲಿಸುವ ಮೂಲಕ ನಮ್ಮ ದೇಶದ ಸಂವಿಧಾನವನ್ನು ಗೌರವಿಸಬೇಕೆಂದು ಹೇಳಿದರು.
ಅಂಗಡಿ ಇಂಟರನ್ಯಾಷನಲ್ ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಇನಾಮದಾರ ಮಾತನಾಡಿದರು.
ಡಿಪ್ಲೋಮಾ ಪ್ರಾಚಾರ್ಯ ಪ್ರೊ. ಎಸ್. ದೊಡಮನಿ, ಡಾ. ಬಿ.ಟಿ. ಸುರೇಶ ಬಾಬು, ಪ್ರೊ. ಎಚ್.ಎಸ್. ಪಾಟೀಲ, ದೈಹಿಕ ನಿರ್ದೇಶಕರಾದ ವಿಶಾಂತ ದಮೋಣೆ ಹಾಗೂ ಮಹಾದೇವ ಶಿರಗಾಂವಕರ, ಪ್ರಸಾದ ಪಂಚಾಕ್ಷರಿಮಠ, ಬ್ರಿಜೇಶ ಪಾಟೀಲ, ಗಿರೀಶ ಕುಲಕರ್ಣಿ, ಗಿರೀಶ ಮಡ್ಡಿಮನಿ, ಮಂಜುಶ್ರೀ ಹಾವಣ್ಣವರ, ಅಂಖಿತಾ ಕೊಣ್ಣೂರ, ತೇಜಸ್ವಿನಿ ಸೊಬರದ, ಶಿವಪ್ಪ ತಿರಕಣ್ಣವರ, ಮಯೂರ ಬಸರಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಪ್ರಿಯಾಂಕಾ ಪೂಜಾರಿ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button