Latest

ಅಕ್ಷರ ದಾಸೋಹ ಯೋಜನೆಯ ಪೂರ್ವಭಾವಿ ಸಭೆ

 

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ :

ಸ್ಥಳೀಯ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನದ ಶ್ರೀ ಜಗದ್ಗುರು ರೇಣುಕಾಚಾರ್ಯ ಅಕ್ಷರ ದಾಸೋಹ ಕೇಂದ್ರದಲ್ಲಿ 2019-2020 ಸಾಲಿನ ಅಕ್ಷರ ದಾಸೋಹ ಯೋಜನೆಯ ಪೂರ್ವಭಾವಿ ಸಭೆ ನಡೆಯಿತು.

Home add -Advt

 ಬೆಳಗಾವಿ ಜಿಲ್ಲೆಯ ಹತ್ತು ತಾಲೂಕಿನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.  ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆಯ ಅನುಷ್ಠಾನವನ್ನು  ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ ಆಧುನಿಕ ಉಪಕರಣವನ್ನು ಬಳಸಿ ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ವಲಯದ 65,000 ಮಕ್ಕಳಿಗೆ ಬಿಸಿ ಊಟವನ್ನು ಮತ್ತು ಕ್ಷೀರಭಾಗ್ಯ ಯೋಜನೆಯನ್ನು  ಕಾರ್ಯರೂಪಕ್ಕೆ ತಂದಿರುವುದು  ಖುಷಿಯ ಸಂಗತಿ ಎಂದು ಬೆಳಗಾವಿ ಜಿಲ್ಲಾ ಪಂಚಾಯಿತಿಯ ಅಕ್ಷರ ದಾಸೋಹ ಯೋಜನೆ ಶಿಕ್ಷಣ ಅಧಿಕಾರಿ  ಬಸವರಾಜ್ ಹೆಚ್ ಮಿಲಾನಟ್ಟಿ ಈ ಸಂದರ್ಭದಲ್ಲಿ ಹೇಳಿದರು. 

 ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎನ್ ದಂಡಿನ ಹಾಗೂ ಅಕ್ಷರ ದಾಸೋಹ ಯೋಜನೆ ಶಿಕ್ಷಣ ಅಧಿಕಾರಿಗಳು ಆದ ಡಿ.ಎಸ್. ಕುಲಕರ್ಣಿ, ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ  ಬಿ ಎ ಮೇಕಲಮರಡಿ ಮಾತನಾಡಿದರು.

 ಇದೇ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ  ಸ್ವಾಮಿಗಳು ಮಾತನಾಡಿ, ಅಕ್ಷರ ದಾಸೋಹ ಯೋಜನೆ ಮಕ್ಕಳ ಬೆಳವಣಿಗೆಗಾಗಿ ಇರುವುದರಿಂದ ಶ್ರೀಮಠದಿಂದ ಅಚ್ಚುಕಟ್ಟಾಗಿ ಇರುವ ಆಹಾರವನ್ನು ತಯಾರಿಸುವುದರೊಂದಿಗೆ ಹಬ್ಬ- ಹರಿದಿನಗಳಲ್ಲಿ ಸಿಹಿ ಊಟವನ್ನು ಕೂಡ ವಿತರಿಸಲಾಗುತ್ತಿದೆ  ಎಂದರು.

Related Articles

Back to top button