Latest

ಅಖಿಲ ಭಾರತ ಅರಣ್ಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಸನ್ಮಾನ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಛತ್ತಿಸಘಡದ ರಾಯಪುರದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಅರಣ್ಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಬೆಳಗಾವಿ ವೃತ್ತದ ಅಧಿಕಾರಿ, ಸಿಬ್ಬಂಧಿಯನ್ನು ಅರಣ್ಯ ಭವನದಲ್ಲಿ ಬುಧವಾರ ಸನ್ಮಾನಿಸಲಾಯಿತು.
ಬೆಳಗಾವಿ ಸಿಸಿಎಫ್ ಎಂ. ಕರುಣಾಕರನ್ ಹಾಗೂ ನಿವೃತ್ತ ಸಿಸಿಎಫ್ ಎ. ಎಂ. ಅಣ್ಣಯ್ಯ ಅವರು ಸಾಧಕ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಯನ್ನು ಸನ್ಮಾನಿಸಿದರು.
ಓದು ಮತ್ತು ಕ್ರೀಡೆ ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಚಟುವಟಿಕೆ ಆಗಬೇಕು. ಮನಸ್ಸಿಗೆ ಸತತ ಅಧ್ಯಯನ ಹಾಗೂ ದೇಹದ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ. ಅರಣ್ಯ ಸಿಬ್ಬಂಧಿಯ ಕ್ರೀಡಾಶ್ರೇಷ್ಠತೆ ಹೆಚ್ಚಿಸಲು ಬೆಳಗಾವಿ ಅರಣ್ಯ ವೃತ್ತ ಬದ್ಧವಾಗಿದೆ ಎಂದು ಕರುಣಾಕರನ್ ಹೇಳಿದರು.
ಉದ್ದಜಿಗಿತ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಸತ್ಯನಾರಾಯಣ ವರ್ಣೇಕರ, ಡಿಸ್ಕಸ್ ಥ್ರೋ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಕೆ. ಬಿ. ಚಿಗರಿ, ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಫಕೀರಪ್ಪ ಭಂಗಿ, 50ಕಿಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ  ಪಡೆದ ಆರ್ ಎಫ್ ಓ ಸಂಗಮೇಶ ಪ್ರಭಾಕರ  ಅವರನ್ನು ಅಭಿನಂದಿಸಲಾಯಿತು.
ಡಿಸಿಎಫ್ ಎಂ. ವಿ. ಅಮರನಾಥ, ಗೋಕಾಕ ಡಿಸಿಎಫ್ ದೇವರಾಜ, ಡಿಸಿಎಫ್ ಗಳಾದ ಬಸವರಾಜಯ್ಯ, ಅಶೋಕ ಪಾಟೀಲ, ಸರಿನಾ ಚಿಕ್ಕಲಗಾರ, ಆನಂದ ಹುದ್ದಾರ, ಬಾಲಕೃಷ್ಣ ಹಾಗೂ ಎಸಿಎಫ್ ಗಳಾದ ಸಿ. ಬಿ. ಪಾಟೀಲ, ಎಸ್. ಎಂ. ಸಂಗೊಳ್ಳಿ, ಎಂ. ಕೆ. ಪಾತ್ರೋಟ, ಶಿವಾನಂದ ನಾಯಿಕವಾಡಿ, ಬಿ. ಪಿ. ಚವ್ಹಾನ, ಶ್ರೀಕಾಂತ ಖನದಾಳೆ, ಸಂದೀಪ ಅಬ್ಬೇಕರ ಹಾಗೂ ಆರ್ ಎಫ್ ಓ ಶ್ರೀನಾಥ ಕಡೋಲಕರ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button