Kannada NewsKarnataka NewsLatest

*ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿ ಸಮಾನತೆ ಮೆರೆದ ಇಬ್ಬರು ಹೆಣ್ಣುಮಕ್ಕಳು*

ಪ್ರಗತಿವಾಹಿನಿ ಸುದ್ದಿ: ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಮಕ್ಕಳಿಲ್ಲದಿದ್ದರೆ ಮುಕ್ತಿ ದಿಒರೆಯುವುದಿಲ್ಲ ಎಂಬ ಮಾತುಗಳಿವೆ. ಇಂತಹ ಮೂಢನಂಬಿಕೆ, ಸಂಪ್ರದಾಯದ ನಂಬಿಕೆಗಳನ್ನು ಬದಿಗಿಟ್ಟು ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ-ವಿಧಾನ ನೆರವೇರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಬೀರೂರು ಪಟ್ಟಣದ ನಿವಾಸಿ ವಿಶ್ವನಾಥ್ ಅವರು ನಿನ್ನೆ ನಿಧನರಾಗಿದ್ದರು. ಇವರಿಗೆ ಗಂಡು ಮಕ್ಕಳಿರಲಿಲ್ಲ, ಕೇವಲ ಇಬ್ಬರು ಹೆಣ್ಣು ಮಕ್ಕಳಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಪುತ್ರಿಯರು, ತಂದೆಯ ಮೇಲಿನ ಗೌರವ ಮತ್ತು ಪ್ರೀತಿಯಿಂದ ತಾವೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಇಬ್ಬರು ಪುತ್ರಿಯರು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿದರು. ಭಾವಸಾರ ಸಮಾಜದ ಮುಖಂಡರು ಕೂಡ ಹೆಣ್ಣುಮಕ್ಕಳಿಗೆ ತಂದೆಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿತು.

ಮೃತ ವಿಶ್ವನಾಥ್ ಅವರ ಪುತ್ರಿ ಐಶ್ವರ್ಯ ಮತ್ತು ಅವರ ಸೋದರಿ ಭಾವನಾ ತಂದೆಯವರ ಪಾಅರ್ಥಿವ ಶರೀರಕ್ಕೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿ ಹೆಗಲ ಮೇಲೆ ಕುಡಿಕೆ ಹೊತ್ತು ಮೂರು ಸುತ್ತು ಹಾಕಿ ಅಂತಿಮ ನಮನ ಸಲ್ಲಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button