ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯಕಾರಿ ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಬೆಳಗಾವಿಯ ಸಮನ್ವಯ ಕವಿ ಬಿ ಎ ಸನದಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಕವಿ, ಸಾಹಿತಿ, ನಾಟಕ ರಚನೆಕಾರ ಹಾಗು ನಿರ್ದೇಶಕ ಸನದಿಯವರು ನಮ್ಮ ಕನ್ನಡ ಸಾಹಿತ್ಯ ಲೋಕದ ಆಯ್ದ ಮುತ್ತಿನಂತಿದ್ದರು. ಬಹುಮುಖ ಪ್ರತಿಭೆಯ ಅವರು ನಮ್ಮ ಬೆಳಗಾವಿಗೆ ಕೀರ್ತಿ ಪ್ರಾಯರಾಗಿದ್ದರು. ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯರಾಗಿದ್ದರು. ಪ್ರತಿಷ್ಠಾನಕ್ಕೆ ಅವರು ಅಪಾರ ಕೊಡುಗೆ ನೀಡಿದ್ದರು ಎಂದು ಸ್ಮರಿಸಲಾಯಿತು.
ಡಾ ಎಸ್‌ಎಲ್ ಕುಲ್ಕರ್ಣಿಯವರು ನಡಿನಮನ ಸಲ್ಲಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಎಮ್. ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರತಿಷ್ಠಾನ ಪದಾಧಿಕಾರಿಗಳಾದ ಎನ್ ಬಿ ದೇಶಪಾಂಡೆ, ಅರವಿಂದ ಹುನುಗುಂದ, ನೀರಜಾ ಗಣಾಚಾರಿ, ಸ್ವಾತಿ ಘೋಡೆಕರ ಇತರರು ಇದ್ದರು.




