CrimeKannada NewsKarnataka NewsLatest

*ಚೀನಾ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮ್ಯೂಲ್ ಅಕೌಂಟ್‌ಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಚೀನಾ ಸಂಪರ್ಕ ಹೊಂದಿದ್ದ ಮಂಗಳೂರಿನ ಇಬ್ಬರು ಸೈಬರ್ ವಂಚಕರನ್ನು ರಾಜ್ಯ ಸೈಬರ್ ಕಮಾಂಡ್ ಯೂನಿಟ್ ಬಂಧಿಸಿದೆ.

ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್ ಬಂಧಿತರಾಗಿದ್ದಾರೆ.

Home add -Advt

ಬಂಧಿತರು ಟ್ರೇಡಿಂಗ್ ಬಿಸಿನೆಸ್ ಹೆಸರಿನಲ್ಲಿ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಆ ಖಾತೆಗಳನ್ನು ಸೈಬರ್ ವಂಚನೆಗೆ ಬಳಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್‌ಗಳು, 18 ಎಟಿಎಂ/ಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, ಆರು ಚೆಕ್ ಪುಸ್ತಕಗಳು, 1,479.31 ಯುಎಸ್‌ಡಿಟಿ  ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಮಾರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಈ ಜಾಲದ ಮೂಲಕ ಸಂಗ್ರಹಿಸಿ ಚೀನಾದವರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಚೀನಾದ ವಂಚಕರು ಆ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಆದರೆ ಆ ಹಣ ಸೈಬರ್ ವಂಚನೆಯ ಮೂಲಕ ಪಡೆದದ್ದಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಬಳಸಲಾಗಿದ್ದ 37 ಬ್ಯಾಂಕ್ ಖಾತೆಗಳ ವಿರುದ್ಧ ದೇಶದಾದ್ಯಂತ 88ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಖಾತೆಗಳ ಮೂಲಕ ನಡೆದ ಹಣಕಾಸು ವ್ಯವಹಾರಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Related Articles

Back to top button