Belagavi NewsBelgaum NewsKarnataka News

*ತೆಂಗಿನಕಾಯಿ ಕೀಳುವಾಗ ಹೈಟೆನ್ಶನ್ ವಿದ್ಯುತ್ ಸ್ಪರ್ಶ*: *ದಂಪತಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ವೃದ್ಧ ದಂಪತಿಗಳು ತಮ್ಮ ಮನೆಯ ಹಿತ್ತಲಿನ ತೆಂಗಿನಮರದಲ್ಲಿ ಬೆಳೆದಿದ್ದ ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ 11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂೂಕಿನ ಗುಂಜಿ ಹೋಬಳಿಯ ಸಂಗರಗಾಳಿ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

ಸಂಗರಗಾಳಿ ಗ್ರಾಮದ ಶಾಲು ಶಾವೇರ್ ಮಸ್ಕರೇನ್ (70) ಮತ್ತು ಅವರ ಪತ್ನಿ ಮಿಲಾಗ್ರೀನ್ ಶಾಲೆ ಮಸ್ಕರೇನ್ (66) ಮೃತ ದುರ್ದೈವಿಗಳು. ಶಾಲು ಅವರು ಕಬ್ಬಿಣದ ಪೈಪ್ ಬಳಸಿ ತೆಂಗಿನಮರದಿಂದ ಕಾಯಿ ಬೀಳಿಸಲು ಪ್ರಯತ್ನಿಸುತ್ತಿದ್ದಾಗ ಕಬ್ಬಿಣದ ಪೈಪ್ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿತ್ತು. ಪೈಪ್ ಮೂಲಕ ಶಾಲು ಅವರಿಗೆ ವಿದ್ಯುತ್ ಪ್ರವಹಿಸಿ ಒದ್ದಾಡುತ್ತಿದ್ದರು. ಪತಿಯನ್ನು ರಕ್ಷಿಸಲು ಮಿಲಾಗ್ರೀನ್ ಅವರು ಪ್ರಯುತ್ನಿಸಿದಾಗ ಅವರಿಗೂ ವಿದ್ಯುತ್ ಪ್ರವಹಿಸಿದ್ದರಿಂದ ಅವರೂ ಒದ್ದಾಡುತ್ತಲೇ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಹೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button