ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮತದಾರರಿಗೆ ಜಾಗೃತಿ ಮೂಡಿಸಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ವಾಕಥಾನ್ ಅದ್ಭುತ ಯಶಸ್ವಿಯಾಗಿದೆ.
ಬೆಳಗಾವಿ ವೋಟ್ಸ್ 100% ಸಹಯೋಗದಲ್ಲಿ ಬೆಳಗಾವಿ ಸ್ವೀಪ್ ಕಮಿಟಿ ವಾಕಥಾನ್ ಆಯೋಜಿಸಿತ್ತು.
ಸ್ವೀಪ್ ಕಮಿಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಸಿಇಒ ರಾಜೇಂದ್ರ ಕೆವಿ ಹಾಗೂ ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಹೊಸೂರ ವಾಕಥಾನ್ ಗೆ ಚಾಲನೆ ನೀಡಿದರು. ಸಿಪಿಎಡ್ ಮೈದಾನದಿಂದ ಆರಂಭವಾದ ವಾಕಥಾನ್ ಹಿಂಡಲಗಾ ಗಣಪತಿ ಟೆಂಪಲ್, ಹನುಮಾನ್ ನಗರ, ಜಾಧವ ನಗರದ ಮೂಲಕ ವಾಪಸ್ ಸಿಪಿಎಡ್ ಮೈದಾನ ತಲುಪಿತು. ಒಟ್ಟೂ 5 ಕಿಮೀ ವಾಕಥಾನ್ ನಲ್ಲಿ ಸಾವಿರಾರು ಮಹಿಳೆಯರು, ಪುರುಷರು ಪಾಲ್ಗೊಂಡಿದ್ದರು.
ಕಡ್ಡಾಯ ಮತದಾನದ ಜೊತೆಗೆ ನಿರ್ಭಯವಾಗಿ ಮತದಾನ ಮಾಡುವ ಕುರಿತು ಅರಿವು ಮೂಡಿಸುವುದು ಈ ವಾಕಥಾನ್ ಉದ್ದೇಶವಾಗಿದ್ದು, ಬೆಳಗಾವಿ ವೋಟ್ಸ್ 100% ಸಂಘಟನೆಗೆ ರಾಜೇಂದ್ರ ಕೆವಿ ಧನ್ಯವಾದ ಹೇಳಿದರು.
ಬೆಳಗಾವಿ ವೋಟ್ಸ್ 100% ಸಂಘಟನೆಯ ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್, ಸಂದೀಪ್ ನಾಯರ್, ಸತೀಶ್ ಕುಲಕರ್ಣಿ, ಕಿರಣ ನಿಪ್ಪಾಣಿಕರ್, ಎಂ.ಕೆ.ಹೆಗಡೆ, ಆನಂದ ಬುಕ್ಕೆಬಾಗ, ಮುಕುಲ್ ಚೌದರಿ, ಶಶಿಧರ ನಾಡಗೌಡ, ರೋಹಿತ ದೇಶಪಾಂಡೆ, ಆಶುತೋಶ್ ಡೆವಿಡ್, ಅಜಯ ಹೆಡಾ, ಮಯೂರಾ ಶಿವಳಕರ್, ಕೀರ್ತಿ ಟೆಂಬೆ, ವಿನೋದ ದೇಶಪಾಂಡೆ, ರೇಣು ಕುಲಕರ್ಣಿ, ನರಸಿಂಹ ಜೋಶಿ, ರಾಜೇಶ ಹೆಡಾ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ