ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಾಡಿನ ಅನ್ನದಾತನ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ದವಾಗಿದ್ದು,ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಕೋಡಿಹಳ್ಳಿ ಚಂದ್ರಶೆಖರ್ ನೇತೃತ್ವದ ರೈತರ ನಿಯೋಗದೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರದ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆ ಮಾಲೀಕರಿಂದ ಕೊಡಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ನಾಡಿನ ಅನ್ನದಾತರು ಯಾವುದೇ ಕಾರಣಕ್ಕೂ ಹತಶರಾಗಬಾರದು. ನಿಮ್ಮ ರಕ್ಷಣೆಗೆ ಸರ್ಕಾರ ಸದಾ ಬದ್ದವಾಗಿದೆ ಎಂದರು. ರೈತರ ಉತ್ಪನ್ನಗಳನ್ನು ನಿರ್ವಾತ ಪ್ಯಾಕ್(ವ್ಯಾಕುಮ್ ಪ್ಯಾಕ್) ಮೂಲಕ ಮಾರಾಟ ಮಾಡಿದರೆ, ದೀರ್ಘ ಕಾಲ ಉತ್ಪನ್ನಗಳನ್ನು ಕಾಯ್ದಿರಿಸಬಹುದು. ಇದರಿಂದಾಗಿ ರೈತರು, ಬೆಲೆ ಕುಸಿತದಿಂದ ಕಂಗಲಾಗಬೇಕಿಲ್ಲ ಎಂದು ಆತ್ಮವಿಶ್ವಾಸ ತುಂಬಿದರು. ಇದೇ ವೇಳೆ ರೈತರ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ ನಿರ್ವಾತ ಪ್ಯಾಕ್ ಧಾನ್ಯಗಳನ್ನು ವೀಕ್ಷಣೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ