ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ :
ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹರಗಾಪೂರ ಕ್ರಾಸ್ ಹತ್ತಿರ ಬೈಕ್ ಅಪಾಘಾತದಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ.
ಬೈಕ್ ಸವಾರರಾದ ಹರಗಾಪೂರದ ಭೈರು ಅಣ್ಣಪ್ಪಾ ಶಿಂಧೆ (೩೫) ಹಾಗೂ ಅನೀತಾ ಬಾಳಕೃಷ್ಣ ಖರಾಡೆ(೩೭) ಅಪಘಾತದಲ್ಲಿ ಮೃತಪಟಿದಾರೆ.
ರಸ್ತೆಯ ಮೇಲೆ ಕಳೆದ ಎರಡು ದಿನಗಳ ಹಿಂದೆ ಟ್ರಕ್ ಕೆಟ್ಟು ನಿಂತಿತ್ತು. ಬೈಕ್ ಸವಾರರು ಇದರ ಬದಿಗೆ ಹಾದು ಹೋಗುವಾಗ ಹಿಂದಿನಿಂದ ಕಾರು ವೇಗದಿಂದ ಬಂದು ಡಿಕ್ಕಿಹೊಡೆದ ರಭಸಕ್ಕೆ ಟ್ರಕ್ ಹಾಗೂ ಕಾರು ನಡುವೆ ಸಿಕ್ಕು ಬೈಕ್ ಸವಾರರು ಸ್ಥಳದಲ್ಲಿ ಮೃಪಟ್ಟಿದ್ದಾರೆ. ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.