Latest

ಅಭಿನವ ಆಧುನಿಕ ಬಸವಣ್ಣ ಸಿದ್ದಗಂಗಾ ಶ್ರೀ ನಿಧನಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರ ಕಂಬನಿ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಮಾಜವನ್ನು ಕಾಪಾಡಿದಂತ ಅಭಿನವ ಆಧುನಿಕ ಬಸವಣ್ಣ  ಡಾ. ಶಿವಕುಮಾರ ಸ್ವಾಮೀಜಿ ಎಂದು ಶಾಸಕಿ, ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಬಣ್ಣಿಸಿದ್ದಾರೆ. ಶ್ರೀಗಳನ್ನು ಕಳೆದುಕೊಂಡ ನಾಡು ಅನಾಥವಾಗಿದೆ. ಅವರ ತ್ರಿವಿಧ ದಾಸೋಹ  ಸ್ಮರಣೀಯವಾದದ್ದು, ತಮ್ಮ ಇಡೀ ಜೀವನವನ್ನು ಜನರಿಗೆ ಹಾಗೂ ಸಮಾಜಕ್ಕೆ ಮೀಸಲಿಟ್ಟಂತಹ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಶ್ರೀಗಳ ಶ್ರದ್ಧಾಂಜಲಿ ಸಭೆ ಸೋಮವಾರ ಸಂಜೆ ಸದಾಶಿವ ನಗರದ  ರಡ್ಡಿ ಭವನದಲ್ಲಿ ನಡೆಯಿತು.
ರಡ್ಡಿ ಸಂಘದ ಅಧ್ಯಕ್ಷ ಆರ್.ವಿ.ಮುಳ್ಳೂರ್ ನೇತೃತ್ವದಲ್ಲಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಬೆಳಗಾವಿಯ ಕನ್ನಡ ಸಂಘಟನೆಗಳು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಂಜೆ ಶ್ರದ್ಧಾಂಜಲಿ ಅರ್ಪಿಸಿತು. ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ  ಮಾಡಿ ಮೊಂಬತ್ತಿಗಳನ್ನು ಹಚ್ಚುವ ಮೂಲಕ ಅಗಲಿದ ನಡೆದಾಡುವ ದೇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button