Kannada NewsKarnataka NewsLatestPolitics

*ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಆಗಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಸ್ಪಷ್ಟನೆ*

ವಿಧಾನ ಪರಿಷತ್‌ ಕಲಾಪದ ಶೂನ್ಯ ವೇಳೆ ಎಂ.ನಾಗರಾಜ್‌ ಪ್ರಶ್ನೆಗೆ ಸಚಿವರ ಉತ್ತರ

ಪ್ರಗತಿವಾಹಿನಿ ಸುದ್ದಿ: ವಿಧಾನಪರಿಷತ್‌ (ವಿಧಾನಸೌಧ): ಬೆಳಗಾವಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಆಗಿಲ್ಲ, ಅವಧಿ ಮುಗಿದ ಆಹಾರವನ್ನು ಪೂರೈಕೆ ಮಾಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅವರು ಸ್ಪಷ್ಟನೆ ನೀಡಿದರು.

Home add -Advt

ಬಜೆಟ್‌ ಅಧಿವೇಶನದ ಎರಡನೇ ದಿನವಾದ ಸೋಮವಾರ ನಡೆದ ವಿಧಾನ ಪರಿಷತ್‌ ಕಲಾಪದ ಶೂನ್ಯದ ವೇಳೆ ಕಾಂಗ್ರೆಸ್‌ ಸದಸ್ಯರಾದ ಎಂ.ನಾಗರಾಜ್‌ ಅವರು, “ಬೆಳಗಾವಿ ಅಂಗನವಾಡಿ ಮಕ್ಕಳಿಗೆ ‘ಎಕ್ಸ್‌ಪೈರಿ’ ಮಿಲೆಟ್ ಲಡ್ಡು!” ಎಂದು ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿರುವ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಜಿಲ್ಲಾ ಉಪ ನಿರ್ದೇಶಕರು, ಸಿಡಿಪಿಒಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದಿರುವೆ, ಯಾವುದೇ ಲೋಪಗಳು ಕಂಡು ಬಂದಿಲ್ಲ ಎಂದರು.

6 ತಿಂಗಳ ಹಿಂದಿನ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದೆಲ್ಲಾ ಹೇಳಲಾಗಿತ್ತು. ಆದರೆ, ಅಂಗನವಾಡಿ ಕೆಂದ್ರಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಸಂಬಂಧ ಯಾವುದೇ ಲೋಪ ಆಗಿಲ್ಲ. ತಪ್ಪು ಮಾಡಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇನೆ. ಸದ್ಯ ಯಾವುದೇ ತಪ್ಪು ಆಗಿಲ್ಲ ಎಂದು ಸಚಿವರು ತಿಳಿಸಿದರು.

Related Articles

Back to top button