
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಂಸ್ಕಾರ ಭಾರತಿಯ ಬೆಳಗಾವಿ ಶಾಖೆಯ ಉದ್ಘಾಟನೆ ಇಂದು ಸಂಜೆ 6 ಗಂಟೆಗೆ ನಡೆಯಲಿದೆ.
ಗೋಗಟೆ ಕಾಲೇಜಿನ ವೇಣುಗೋಪಾಲ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಶಿಕ್ಷಣ ತಜ್ಞ ಶರತ್ ಕುಮಾರ ಅತಿಥಿಗಳಾಗಿ ಆಗಮಿಸುವರು. ಸಂಸ್ಕಾರ ಭಾರತಿಯ ಉತ್ತರ ಕರ್ನಾಟಕ ಸಂಘಟನಾ ಮಂತ್ರಿ ಚಿದಂಬರ ಸವಾಯ್ ಮುಖ್ಯ ವಕ್ತಾರರಾಗಿ ಆಗಮಿಸುವರು.
ಕಲೆಯ ಮೂಲಕ ದೇಶಭಕ್ತಿ ಮತ್ತು ಯೋಗ್ಯವಾದ ವಿವಿಧ ಕಲೆಗಳಿಗೆ ತರಬೇತಿ ನೀಡುವುದು ಮತ್ತು ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಕಾರ ಭಾರತಿ ಸಮಾಜದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂಸ್ಕಾರ ಭಾರತಿ ಬೆಳಗಾವಿ ಶಾಖೆ ಸಂಗೀತ, ನಾಟಕ, ಚಿತ್ರಕಲೆ, ಕವನ, ಸಾಹಿತ್ಯ ಮತ್ತು ನೃತ್ಯ ವಿಭಾಗಗಳಿಗೆ ಸಂಬಂಧಿಸಿದ ನಗರದ ಪ್ರತಿಷ್ಠಿತ ಮತ್ತು ಉದಯೋನ್ಮುಖ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲು , ಪ್ರಾಂತ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಥಳೀಯ ಪ್ರತಿಭೆಗಳಿಗೆ  ಸೂಕ್ತವಾದ ವೇದಿಕೆಯನ್ನು ಸೃಷ್ಟಿಸಲು ಒಂದು ಮಾಧ್ಯಮ.
ಭಾರತೀಯ ಸಂಸ್ಕೃತಿಯ ಮಹೋನ್ನತ ಮೌಲ್ಯಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ, ರಾಷ್ಟ್ರೀಯ ಗೀತೆ ಸ್ಪರ್ಧೆ, ನುಕ್ಕಡ್ ನಾಟಕ್, ರಾಷ್ಟ್ರೀಯ ನೃತ್ಯ, ನೃತ್ಯ, ಚುಟುಕುಸಾಹಿತ್ಯ, ರಂಗೋಲಿ, ಚಿತ್ರಕಲೆ, ಕವನ, ಪ್ರಯಾಣ, ರಾಷ್ಟ್ರೀಯ ಕವಿ ಸಮ್ಮೇಳನ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ಮುಂದಿನ ದಿನದಲ್ಲಿ ಹಮ್ಮಿಕೊಳ್ಳುವ ಯೋಜನೆ ಸಂಸ್ಕಾರ ಭಾರತಿ ಬೆಳಗಾವಿ ರೂಪಿಸಿದೆ.
					 
					 
				 
					 
					 
					 
					
 
					 
					 
					


