Belagavi NewsBelgaum NewsCrimeKannada NewsKarnataka NewsNationalPolitics

*ಕಾಗವಾಡ ಪೊಲೀಸರಿಂದ ಮನೆ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಂಗಾರದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ದಾಖಲಾದ ಪ್ರಕರಣದ ತನೆಖೆ ನಡೆಸಿದ ಕಾಗವಾಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ‌. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. 

 ಫೆ. 10 ರಂದು ಜಿನ್ನಪ್ಪಾ ಶ್ರೀಪಾಲ ಮಾಕನ್ನವರ ಎಂಬುವರು ಕಾಗವಾಡ ಠಾಣೆಗೆ ಹಾಜರಾಗಿ ತಮ್ಮ ಮನೆಯಲ್ಲಿ ಕಳ್ಳತಮವಾಗಿರುವ ಬಗ್ಗೆ ದೂರು ನೀಡಿದ್ದರು. 

ಮನೆಯ ಕೊಂಡಿಯನ್ನು ಮುರಿದು ಮನೆಯೊಳಗೆ ನುಗ್ಗಿ ಟ್ರೇಜರಿಗಳಲ್ಲಿಯ ಇಟ್ಟಿದ 172ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 410 ಗ್ರಾಂ ತೂಕದ ಬೆಳ್ಳಿಯ ಆಭರಣ, 12,000 ರೂ ಬೆಲೆಯ ಡೈಮೆಂಡ ಉಂಗುರ ಹಾಗೂ 25,000 ರೂ ನಗದು ಹೀಗೆ ಒಟ್ಟು 22.03.500 ರೂ ಕಿಮ್ಮತ್ತಿನ ಆಭರಣ ಹಾಗೂ ಹಣವನ್ನು ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.

ಕಾಗವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 45/2026 ಕಲಂ: 331[3] 33][4] 305 ಬಿಎನ್ಎಸ್-2023 ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಾದ ಯಾಸೀನ ನಬೀಸಾಬ ಸುತಾರ (29)  ಹಾಗೂ ಜಮೀರ ಶೌಖತಅಲಿ ಜಮಾದಾರ (37) ಇವರನ್ನು ಬಂಧಿಸಿ ಅವರಿಂದ 17,19,240 ಬೆಲೆಯ  143.27 ಗ್ರಾಂ ತೂಕದ ಬಂಗಾರದ ಆಭರಣಗಳು.‌

 2,14,610 ಬೆಲೆಯ 858.44 ಗ್ರಾಂ ತೂಕದ ಬೆಳ್ಳಿಯ ಆಭರಣಗಳು.‌ 25,000 ಬೆಲೆಯ ಬೈಕ್. ಹೀಗೆ ಒಟ್ಟು 19,58,850 ರೂ ಬೆಲೆಯ ಬಂಗಾರದ, ಬೆಳ್ಳಿಯ ಹಾಗೂ ಬೈಕ್ ವಶಪಡಿಸಲಾಗಿದೆ. ಸಧ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button