Kannada NewsKarnataka NewsLatest

*ಕನ್ನಡಿಗರ ಕ್ಷಮೆ ಕೇಳಿದ ಹಿಂದಿವಾಲ*

ಪ್ರಗತಿವಾಹಿನಿ ಸುದ್ದಿ: ಹಿಂದಿ ಮಾತನಾಡದಿದ್ದರೆ ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿ ಕನ್ನಡಿಗ ಕಾರ್ಮಿಕನ ಮೇಲೆ ದರ್ಪ ತೋರಿ ಬೆದರಿಕೆ ಹಾಕಿದ್ದ ಹಿಂದಿವಾಲ ಕೊನೆಗೂ ಕ್ಷಮೆ ಕೇಳಿದ್ದಾನೆ.

ಬೆಂಗಳೂರಿನ ನೆಲಮಂಗಲ ಬಳಿಯ ಹುಸ್ಕೂರು ರಸ್ತೆಯ ಖಾಸಗಿ ಗೋದಾಮಿನಲ್ಲಿ ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕರು ಕೆಲಸ ಮಾಡುವ ವೇಳೆ, ಹಿಂದಿ ಭಾಷೆಯ ಗೋದಾಮಿನ ಮೇಲ್ ವಿಚಾರಕನೊಬ್ಬ, ಕೆಲಸದ ವಿಚಾರದಲ್ಲಿ ತನಗೆ ಕನ್ನಡ ಬರಲ್ಲ ಎಂದಿದ್ದಾನೆ. ‘ಹಿಂದಿ ಕಲಿಯಿರಿ, ಹಿಂದಿ ಕಲಿತು ಕೆಲಸಕ್ಕೆ ಬರಬೇಕು. ಇಲ್ಲ ಅಂದರೆ ಕೆಲಸದಿಂದ ವಜಾ ಮಾಡಲಾಗುವುದು’ ಎಂದು ಧಮ್ಕಿ ಹಾಕಿದ್ದ.

ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ನೆಲಮಂಗಲ ಬಳಿಯ ಹುಸ್ಕೂರು ಖಾಸಗಿ ಗೋದಾಮು ಮುಂದೆ ಪ್ರತಿಭಟನೆ ನಡೆಸಿ ಗೋದಾಮು ಮುತ್ತಿಗೆ ಹಾಕಲು ಯತ್ನಿಸಿದ್ದರು.

ಗೋದಾಮು ಮೇಲ್ವಿಚಾರಕ ಅಶೋಕ್ ನನ್ನು ಕೆಲಸದಿಂದ ವಜಾಗೊಳಿಸಬೇಕು ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಹಿಂದಿವಾಲ ಅಶೋಕ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆತ ಕೈಮುಗಿದು ತನ್ನದು ತಪ್ಪಾಯಿತು. ಇನ್ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ. ಕನ್ನಡಿಗರನ್ನು ಬೈದಿದ್ದಕ್ಕೆ ಕ್ಷಮೆಯಾಚಿಸುವುದಾಗಿ ಕೈಮುಗಿದು ಕ್ಷಮೆ ಯಾಚಿಸಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button