Kannada NewsLatestSports

*ಏಕದಿನ ವಿಶ್ವಕಪ್ ಟೂರ್ನಿ: ಸೂಪರ್ 7 ತಂಡಗಳ ಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಈ ಬಾರಿ ಹೊಸ ಸ್ವರೂಪದಲ್ಲಿ ಮೂಡಿಬರಲಿದೆ. ವಿಶ್ವದ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ಮತ್ತಷ್ಟು ರೋಚಕಗೊಳಿಸಲು ಐಸಿಸಿ ಈ ಬಾರಿ ‘ಸೂಪರ್-7’ ಎಂಬ ಹೊಸ ಹಂತವನ್ನು ಪರಿಚಯಿಸಿದೆ. ಈ ಹಂತಕ್ಕೆ 7 ಪ್ರಮುಖ ದೈತ್ಯ ತಂಡಗಳು ಯಾವವು ಎಂಬುದು ಪ್ರಕಟವಾಗಿದೆ.

ಐಸಿಸಿ ಏಕದಿನ ವಿಶ್ವಕಪ್​ನ ಪಂದ್ಯಗಳ ವೇಳಾಪಟ್ಟಿಯನ್ನು ಸುಲಭವಾಗಿ ರೂಪಿಸಲು ವಿಶ್ವದ ಪ್ರಮುಖ 7 ಬಲಿಷ್ಠ ತಂಡಗಳಿಗೆ ‘ಪ್ರೀ-ಸೀಡಿಂಗ್’ ಮಾನ್ಯತೆ ನೀಡಿದೆ. ಒಂದು ವೇಳೆ ಈ ತಂಡಗಳು ಗ್ರೂಪ್ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿ ಅರ್ಹತೆ ಪಡೆದುಕೊಂಡರೆ, ಸೂಪರ್-7 ಹಂತದಲ್ಲಿ ಈ ಕೆಳಗಿನ ಸ್ಥಾನಗಳನ್ನು ಅಲಂಕರಿಸಲಿವೆ.

ಸೂಪರ್ ಸೆವೆನ್​ನ 7 ತಂಡಗಳು:
ಭಾರತ (A1 ಸೀಡಿಂಗ್): ಟೀಮ್ ಇಂಡಿಯಾ ಸದ್ಯ ‘ಗ್ರೂಪ್ ಎ’ ನಲ್ಲಿದ್ದು, ಸೂಪರ್-7 ಹಂತಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತ.
ಆಸ್ಟ್ರೇಲಿಯಾ (A2 ಸೀಡಿಂಗ್): ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಕೂಡ ‘ಗ್ರೂಪ್ ಎ’ ನಿಂದ ಸೂಪರ್-7 ಪ್ರವೇಶಿಸುವ ಬಲಿಷ್ಠ ಸ್ಪರ್ಧಿಯಾಗಿದೆ.
ಪಾಕಿಸ್ತಾನ್ (A3 ಸೀಡಿಂಗ್): ಏಷ್ಯಾದ ಮತ್ತೊಂದು ದೈತ್ಯ ಪಾಕಿಸ್ತಾನ್ ತಂಡಕ್ಕೂ ‘ಗ್ರೂಪ್ ಎ’ ನಿಂದ ಮೊದಲೇ ಸೀಡಿಂಗ್ ಸ್ಥಾನ ನೀಡಲಾಗಿದೆ.
ನ್ಯೂಝಿಲೆಂಡ್ (B1 ಸೀಡಿಂಗ್): ‘ಗ್ರೂಪ್ ಬಿ’ ನಿಂದ ಕಣಕ್ಕಿಳಿಯಲಿರುವ ಕಿವೀಸ್ ಪಡೆ ಸೂಪರ್-7 ನಲ್ಲಿ ಮೊದಲ ಸ್ಥಾನದ ಮೇಲೆ ಕಣ್ಣಿಟ್ಟಿದೆ.
ಸೌತ್ ಆಫ್ರಿಕಾ (B2 ಸೀಡಿಂಗ್): ಜಂಟಿ ಆತಿಥ್ಯ ವಹಿಸಿರುವ ಪ್ರೋಟಿಯಾಸ್ ಪಡೆ ‘ಗ್ರೂಪ್ ಬಿ’ ಯಿಂದ ಸುಲಭವಾಗಿ ಅರ್ಹತೆ ಪಡೆಯುವ ನಿರೀಕ್ಷೆಯಿದೆ.
ಶ್ರೀಲಂಕಾ (B3 ಸೀಡಿಂಗ್): ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಲಂಕಾ ಪಡೆಗೂ ‘ಗ್ರೂಪ್ ಬಿ’ ನಿಂದ ಸ್ಥಾನ ಮೀಸಲಿಡಲಾಗಿದೆ.
ಇಂಗ್ಲೆಂಡ್ (AB4 ಸೀಡಿಂಗ್): ಮಾಜಿ ಚಾಂಪಿಯನ್ಸ್ ಇಂಗ್ಲೆಂಡ್‌ಗೆ ‘ವೈಲ್ಡ್‌ಕಾರ್ಡ್’ ಮಾದರಿಯಲ್ಲಿ ವಿಶೇಷ ಸೀಡಿಂಗ್ (AB4) ಸ್ಥಾನವನ್ನು ಕಲ್ಪಿಸಿಕೊಡಲಾಗಿದೆ.

ಐಸಿಸಿ ಈಗ ಪ್ರಕಟಿಸಿರುವ ಈ 7 ತಂಡಗಳ ಪಟ್ಟಿ ಅಂತಿಮವಲ್ಲ. ಕೇವಲ ಪಂದ್ಯಗಳ ವೇಳಾಪಟ್ಟಿ ಮತ್ತು ಕ್ರೀಡಾಂಗಣಗಳನ್ನು ಮುಂಚಿತವಾಗಿಯೇ ಸುಲಭವಾಗಿ ನಿಗದಿಪಡಿಸಲು ಐಸಿಸಿ ಈ ‘ಪೂರ್ವ-ಸೀಡಿಂಗ್’ ಸೂತ್ರವನ್ನು ಬಳಸಿಕೊಂಡಿದೆ.

ಒಂದು ವೇಳೆ ಸೀಡಿಂಗ್ ಪಡೆದಿರುವ ಈ 7 ಪ್ರಮುಖ ತಂಡಗಳಲ್ಲಿ ಯಾವುದಾದರೂ ತಂಡ ಗ್ರೂಪ್ ಹಂತದಲ್ಲೇ ಸೋತು ಹೊರಬಿದ್ದರೆ, ಆ ಸ್ಥಾನವನ್ನು ಆಯಾ ಗ್ರೂಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಬಾಂಗ್ಲಾದೇಶ್, ಝಿಂಬಾಬ್ವೆ ಅಥವಾ ಅಫ್ಘಾನಿಸ್ತಾನದಂತಹ ಇತರ ಅರ್ಹತೆ ಪಡೆದ ತಂಡಗಳು ಕಸಿದುಕೊಳ್ಳಲಿವೆ. ಅಂದರೆ, ಈ ತಂಡಗಳು ಸೂಪರ್-7 ಹಂತಕ್ಕೆ ಪ್ರವೇಶಿಸಲಿವೆ ಎಂಬ ಮುನ್ಸೂಚನೆಯ ಆಧಾರದ ಮೇಲಷ್ಟೇ ಐಸಿಸಿ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button